alex Certify ಬಡವರಿಗಾಗಿ ಮಾಲ್​ನಲ್ಲಿ ಉಚಿತವಾಗಿ ಚಳಿಗಾಲದ ಬಟ್ಟೆ ಪೂರೈಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಡವರಿಗಾಗಿ ಮಾಲ್​ನಲ್ಲಿ ಉಚಿತವಾಗಿ ಚಳಿಗಾಲದ ಬಟ್ಟೆ ಪೂರೈಕೆ

ಲಖನೌ: ಇಲ್ಲಿನ ‘ಅನೋಖಾ ಮಾಲ್‌’ನಲ್ಲಿ ಬಡವರು ಬಂದು ತಮ್ಮ ಆಯ್ಕೆಯ ಬೆಚ್ಚನೆಯ ಬಟ್ಟೆ ಅಥವಾ ಇತರ ಪರಿಕರಗಳನ್ನು ಯಾವುದೇ ಹಣ ನೀಡದೆ ತೆಗೆದುಕೊಂಡು ಹೋಗಬಹುದಾಗಿದೆ. ನಂಬಲು ಅಸಾಧ್ಯವೆನಿಸುವ ಈ ಕಾರ್ಯ ಕೆಲ ವರ್ಷಗಳಿಂದ ನಡೆಯುತ್ತಲಿದೆ.

ಹಿತೈಷಿಗಳು, ದಾನಿಗಳು ನೀಡುವ ಬಟ್ಟೆಗಳನ್ನು ಬಡ ರಿಕ್ಷಾ ಚಾಲಕರು, ಕಾರ್ಮಿಕರು, ಕೊಳೆಗೇರಿ ನಿವಾಸಿಗಳು ಮತ್ತು ಸಮಾಜದ ಇತರ ವಂಚಿತ ವರ್ಗಗಳ ಜನರಿಗೆ ನೀಡಲಾಗುತ್ತದೆ. ಚಳಿಗಾಲದ ತಿಂಗಳುಗಳಲ್ಲಿ ಈ ಬೆಚ್ಚನೆಯ ಉಡುಪು ಉಚಿತವಾಗಿ ನೀಡಲಾಗುತ್ತದೆ.

ಮಾಲ್ ಮೂರು ತಿಂಗಳ ಕಾಲ ಕಾರ್ಯನಿರ್ವಹಿಸುತ್ತದೆ, ಡಿಸೆಂಬರ್, ಜನವರಿ ಮತ್ತು ಫೆಬ್ರವರಿ. ಇಲ್ಲಿನ ರಹೀಮ್ ನಗರದಲ್ಲಿ, ದಾನಿಗಳಿಂದ ಉಣ್ಣೆಯನ್ನು ತೆಗೆದುಕೊಂಡು ಬಡವರಿಗೆ ಪ್ರದರ್ಶನಕ್ಕೆ ಇಡಲಾಗುತ್ತದೆ. ಕಳೆದ ಐದು ವರ್ಷಗಳಿಂದ ಇದು ನಡೆಯುತ್ತಿದ್ದು, ಇದೀಗ ಬೆಳಕಿಗೆ ಬಂದಿದೆ. ಈ ಮಾಲ್ ನಿರ್ವಹಿಸುತ್ತಿರುವ ಡಾ ಅಹ್ಮದ್ ರಜಾ ಖಾನ್ ಈ ವಿಷಯ ತಿಳಿಸಿದ್ದಾರೆ.

“ಉಣ್ಣೆಯ ಬಟ್ಟೆಗಳನ್ನು ಅಗತ್ಯವಿರುವವರಿಗೆ ವಿತರಿಸಿದಾಗ ಇತರ ಸ್ಥಳಗಳು ಮತ್ತು ಸಂದರ್ಭಗಳಲ್ಲಿ ಅವುಗಳನ್ನು ಸ್ವೀಕರಿಸಲು ಹಿಂಜರಿಯುತ್ತಾರೆ. ಆದರೆ ಅನೋಖಾ ಮಾಲ್‌ನಲ್ಲಿ, ಶಾಪಿಂಗ್​ ರೀತಿಯಲ್ಲಿ ಇದನ್ನು ಆಯೋಜನೆ ಮಾಡಲಾಗುತ್ತದೆ. ಎಲ್ಲರೂ ತಮ್ಮಿಷ್ಟದ ಬಟ್ಟೆಗಳನ್ನು ತೆಗೆದುಕೊಂಡು ಹೋಗಬಹುದು ಎನ್ನುತ್ತಾರೆ ಖಾನ್​.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...