ಅದೃಷ್ಟದ ಚಕ್ರ ನಿಮ್ಮೆಡೆ ಯಾವಾಗ ತಿರುಗುತ್ತದೆ ಎಂದು ಹೇಳಲು ಬರುವುದಿಲ್ಲ. ಬ್ರಿಟನ್‌ನ ಕಾರ್ಖಾನೆಯೊಂದರ ಕಾರ್ಮಿಕನಿಗೆ ಇಂಥದ್ದೇ ಅನುಭವವಾಗಿದೆ. ಇಯಾನ್ ಬ್ಲಾಕ್ ಹೆಸರಿನ ಈತನ ಅದೃಷ್ಟಗಾಥೆಯನ್ನು ದಿ ಸನ್ ನಿಯತಕಾಲಿಕೆ ವರದಿ ಮಾಡಿದೆ.
ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ ಇಯಾನ್ ಅಲ್ಲೇ ದಾರಿಯಲ್ಲಿದ್ದ ಲಾಟರಿ ಟಿಕೆಟ್ ಅಂಗಡಿಯೊಂದರಲ್ಲಿ ನಿಂತು ಸ್ಕ್ರಾಚ್ ಕಾರ್ಡ್ ಒಂದನ್ನು ಖರೀದಿ ಮಾಡಿದ್ದಾರೆ. ಕಾರ್ಡ್ ಸ್ಕ್ರಾಚ್ ಮಾಡಿ ನೋಡಿದಾಗ ಅದರಲ್ಲಿ 2 ಮಿಲಿಯನ್ ಪೌಂಡ್ ಎಂದು ಬರೆಯಲಾಗಿತ್ತು. ಈ ಮೊತ್ತ ಭಾರತೀಯ ಕರೆನ್ಸಿಯನ್ನು 20 ಕೋಟಿ ರೂಪಾಯಿಗಳಷ್ಟಾಗುತ್ತದೆ.
ಪೇಂಟರ್ ಗೆ ಖುಲಾಯಿಸಿದ ಅದೃಷ್ಟ: 500 ರೂ. ಚೇಂಜ್ ಗಾಗಿ ಖರೀದಿಸಿದ ಲಾಟರಿಯಲ್ಲಿ ಜಾಕ್ ಪಾಟ್, 12 ಕೋಟಿ ರೂ. ಬಹುಮಾನ
5 ಪೌಂಡ್ ಮೌಲ್ಯದ ಮೋನೋಪೊಲಿ ಡಿಲಕ್ಸ್ ಸ್ಕ್ರಾಚ್ ಕಾರ್ಡ್‌ಅನ್ನು ಇಯಾನ್ ಖರೀದಿ ಮಾಡಿದ್ದರು. ತಮ್ಮ ಕಾರಿನಲ್ಲಿ ಕುಳಿತು ಈ ಟಿಕೆಟ್ ಸ್ಕ್ರಾಚ್ ಮಾಡಿದ 61ರ ಹರೆಯದ ಬ್ಲಾಕ್ ದುಡ್ಡು ಗೆದ್ದ ಖುಷಿಯಲ್ಲಿ ಸಿಕ್ಕಾಪಟ್ಟೆ ಥ್ರಿಲ್ ಆಗಿ ಸುದ್ದಿಯನ್ನು ತಮ್ಮ ಮಡದಿ ಸಾಂಡ್ರಾ ಜೊತೆಗೆ ಹಂಚಿಕೊಂಡಿದ್ದಾರೆ.
“ನಾನು ಇಷ್ಟೊಂದು ಸೊನ್ನೆಗಳನ್ನು ನೋಡಿದ ನೆನಪೇ ಇಲ್ಲ. ಇದು ನಿಜಕ್ಕೂ 2 ಮಿಲಿಯನ್ ಪೌಂಡ್ ಹೌದಾ ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುತ್ತಿರುತ್ತೇನೆ,” ಎನ್ನುತ್ತಾರೆ ಇಯಾನ್ ಬ್ಲಾಕ್.
ತಮ್ಮ ಮುದ್ದಿನ ಲ್ಯಾಬ್ರಡಾರ್ ಶ್ವಾನ ಮೆಗ್‌ಗೆ ಶಸ್ತ್ರಚಿಕಿತ್ಸೆ ಮಾಡಿಸಲು ಹಾಗೂ ತಮ್ಮ ಐವರು ಮಕ್ಕಳು ಮತ್ತು 10 ಮೊಮ್ಮಕ್ಕಳಿಗೆ ಸುಗಮ ಜೀವನ ಕಟ್ಟಿಕೊಡುವ ಆಲೋಚನೆಯನ್ನು ಗೆದ್ದ ದುಡ್ಡಿನಿಂದ ಮಾಡುತ್ತಿದ್ದಾರೆ ಇಯಾನ್ ಬ್ಲಾಕ್.