ಅದೃಷ್ಟ ಅಂದ್ರೆ ಹೀಗಿರಬೇಕು..! ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಆಂಬುಲೆನ್ಸ್ ಡ್ರೈವರ್ 12-12-2021 7:41AM IST / No Comments / Posted In: Latest News, India, Live News ಯಾರ ಅದೃಷ್ಟ ಹೇಗಿದೆಯೋ ಹೇಳೋಕೆ ಆಗೋದಿಲ್ಲ. ಇವತ್ತು ನಿಮ್ಮ ಜೀವನ ಕಷ್ಟದಲ್ಲಿದ್ರೆ ನಾಳೆ ದಿನ ಒಮ್ಮೆಲೆ ಶ್ರೀಮಂತರಾಗಬಹುದು. ಯಾರಿಗೆ ಗೊತ್ತು ನಿಮ್ಮ ಅದೃಷ್ಟ ಒಂದೇ ದಿನದಲ್ಲಿ ಬದಲಾಗಬಹುದು. ಇದಕ್ಕೆ ಪಶ್ಚಿಮ ಬಂಗಾಳದ ಆಂಬುಲೆನ್ಸ್ ಚಾಲಕನ ಕಥೆ ಸಾಕ್ಷಿಯಾಗಿದೆ. ಪೂರ್ವ ಬರ್ಧಮಾನ್ ಜಿಲ್ಲೆಯ ನಿವಾಸಿ ಶೇಖ್ ಹೀರಾ ಎಂಬುವವರು ಬೆಳಗ್ಗೆ 270 ರೂ.ಗೆ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಮಧ್ಯಾಹ್ನದ ವೇಳೆಗೆ ಅವರು ಕೋಟ್ಯಾಧಿಪತಿಯಾಗಿದ್ದಾರೆ.! ಒಂದು ಕೋಟಿ ರೂ.ಗಳ ಜಾಕ್ ಪಾಟ್ ಬರುತ್ತಿದ್ದಂತೆ ಅವರಿಗೆ ಆನಂದದ ಜೊತೆಗೆ ಭಯವೂ ಶುರುವಾಗಿದೆ. ಎಲ್ಲಿ ಲಾಟರಿ ಟಿಕೆಟ್ ಕೈತಪ್ಪುತ್ತೋ ಅನ್ನೋ ಆತಂಕ ಅವರಿಗಿತ್ತು. ಹೀಗಾಗಿ ನೇರ ಪೊಲೀಸ್ ಠಾಣೆಗೆ ಹೋದ ಅವರು, ಪೊಲೀಸರೊಂದಿಗೆ ತನ್ನ ಮನೆಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಅಷ್ಟೇ ಅಲ್ಲ, ಶೇಖ್ ಮನೆಗೆ ಪೊಲೀಸರನ್ನು ಕೂಡ ನಿಯೋಜಿಸಲಾಗಿದೆ. ಶೇಖ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ಹಣ ಹೊಂದಿಸುತ್ತಿದ್ದ ಶೇಖ್, ಲಾಟರಿಯಲ್ಲಿ ಜಾಕ್ ಪಾಟ್ ಅನ್ನೇ ಹೊಡೆದಿದ್ದಾರೆ. ವೃತ್ತಿಯಲ್ಲಿ ಆಂಬುಲೆನ್ಸ್ ಡ್ರೈವರ್ ಆಗಿರುವ ಶೇಖ್ ತನ್ನ ತಾಯಿ ಬೇಗನೆ ಗುಣಮುಖರಾಗುತ್ತಾರೆ ಎಂಬ ಸಂತಸದಲ್ಲಿ ಮುಳುಗಿದ್ದಾರೆ. ತಾನು ಯಾವಾಗಲೂ ಲಾಟರಿ ಜಾಕ್‌ಪಾಟ್ ಬಗ್ಗೆ ಕನಸು ಕಾಣುತ್ತಿದ್ದೆ, ಆದರೀಗ ಅದು ನಿಜವಾಗಿದೆ ಎಂದು ಶೇಖ್ ಖುಷಿಪಟ್ಟಿದ್ದಾರೆ. ಸದ್ಯಕ್ಕೆ ತನಗೆ ಬಂದಿರುವ ಹಣದಿಂದ ತಾಯಿಗೆ ಚಿಕಿತ್ಸೆ ನೀಡುವುದೇ ತನ್ನ ಪ್ರಥಮ ಆದ್ಯತೆ ಎಂದವರು ಹೇಳಿದ್ದಾರೆ. ನಂತರ ಉಳಿದ ದುಡ್ಡಿನಲ್ಲಿ ಒಳ್ಳೆಯ ಮನೆ ನಿರ್ಮಿಸುವ ಕನಸು ಅವರದ್ದಾಗಿದೆ.