
ಬೆಂಗಳೂರು: ರಾಷ್ಟ್ರೀಯ ತನಿಖಾ ದಳದಿಂದ ಎಲ್.ಟಿ.ಟಿ.ಇ. ಸಂಘಟನೆಯ ಶಂಕಿತ ಉಗ್ರನನ್ನು ಬಂಧಿಸಲಾಗಿದೆ. ಬೆಂಗಳೂರಿನ ರಾಷ್ಟ್ರೀಯ ತನಿಖಾದಳ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತಮಿಳುನಾಡಿನಲ್ಲಿ ಮೊಹಮ್ಮದ್ ಇಮ್ರಾನ್ ಎಂಬುವನನ್ನು ಬಂಧಿಸಿದ್ದಾರೆ.
ಎಲ್‌ಟಿಟಿಇ ಶಂಕಿತ ಉಗ್ರನಾಗಿರುವ ಮೊಹಮ್ಮದ್ ಇಮ್ರಾನ್ ನನ್ನು ತಮಿಳುನಾಡಿನ ತೇಣಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಇಮ್ರಾನ್ ತಲೆಮರೆಸಿಕೊಂಡಿದ್ದ. ಶ್ರೀಲಂಕಾದ ಎಲ್.ಟಿ.ಟಿ.ಇ. ಜೊತೆ ನಿರಂತರ ಸಂಪರ್ಕದಲ್ಲಿದ್ದ ಆರೋಪಿ ಲಂಕಾದಿಂದ ಉಗ್ರರನ್ನು ಭಾರತಕ್ಕೆ ಕರೆತರುತ್ತಿದ್ದ.
2021 ರಲ್ಲಿ ಮಂಗಳೂರು ಬಳಿ ಶ್ರೀಲಂಕಾದ 38 ಪ್ರಜೆಗಳನ್ನು ಬಂಧಿಸಲಾಗಿತ್ತು. ಈ ಸಂಬಂಧ ಎನ್ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಎಲ್‌ಟಿಟಿಇ ಉಗ್ರ ಸಂಘಟನೆ ಮುಖ್ಯಸ್ಥನಾಗಿದ್ದ ವೇಲುಪಿಳ್ಳೈ ಪ್ರಭಾಕರನ್ ಹತ್ಯೆ ನಂತರ ಇಮ್ರಾನ್ ಭಾರತದಲ್ಲಿ ಎಲ್.ಟಿ.ಟಿ.ಇ. ಉಗ್ರರಿಗೆ ಆಶ್ರಯ ಕೊಡಿಸುತ್ತಿದ್ದ ಎನ್ನಲಾಗಿದೆ.