ಕೊಲಂಬಿಯಾದಲ್ಲಿ ನಡೆಯುತ್ತಿರುವ 42ನೇ ವಿಶ್ವ ವೈದ್ಯಕೀಯ ಮತ್ತು ಆರೋಗ್ಯ ಕ್ರೀಡಾಕೂಟದಲ್ಲಿ ಲೆಫ್ಟಿನೆಂಟ್ ಕರ್ನಲ್ ಸಂಜೀವ್ ಮಲಿಕ್ ಐದು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಲೆಫ್ಟಿನೆಂಟ್ ಕರ್ನಲ್ ಸಂಜೀವ್ ಮಲಿಕ್ ಅವರು ಆರ್ಮಿ ಮೆಡಿಕಲ್ ಕಾರ್ಪ್ಸ್ನ ಅಧಿಕಾರಿಯಾಗಿದ್ದು, ಪ್ರಸ್ತುತ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳ ಬಾಡಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಕ್ಷಣಾ ಸಚಿವಾಲಯ ಸೋಮವಾರ ಈ ವಿಷಯ ತಿಳಿಸಿದೆ. “800 ಮೀಟರ್, 1500 ಮೀ, 3000 ಮೀ, 5000 ಮೀ ಮತ್ತು ಕ್ರಾಸ್ ಕಂಟ್ರಿ ಸ್ಪರ್ಧೆಗಳಲ್ಲಿ ಅವರ ಗೆಲುವುಗಳು 2023 ರಲ್ಲಿ ಈ ಸಾಧನೆ ಮಾಡಿದ ಏಕೈಕ ಕ್ರೀಡಾಪಟು ಮತ್ತು 1978 ರಲ್ಲಿ ಕ್ರೀಡಾಕೂಟ ಪ್ರಾರಂಭವಾದಾಗಿನಿಂದ ಕೆಲವೇ ಆಯ್ದ ಕ್ರೀಡಾಪಟುಗಳಲ್ಲಿ ಒಬ್ಬರು” ಎಂದು ಸಚಿವಾಲಯ ತಿಳಿಸಿದೆ.