![](https://kannadadunia.com/wp-content/uploads/2022/03/lpg-subsidy-1601521232.jpg)
ಬೆಂಗಳೂರು : ಭಾರತ್ ಗ್ಯಾಸ್ ಏಜೆನ್ಸಿ, ಧಾರವಾಡ ಇವರ ನಿಯಮಾವಳಿ ಪ್ರಕಾರ ಗೃಹ ಬಳಕೆ ಅನಿಲ ಸಿಲಿಂಡರ್ಗಳನ್ನು ಪ್ರತಿ ಐದು ವರ್ಷಗಳಿಗೊಮ್ಮೆ ತಪಾಸಣೆ ಮಾಡುವುದು ಕಡ್ಡಾಯವಾಗಿದೆ.
ಅದರಂತೆ ಕೆ.ಎಫ್.ಸಿ.ಎಸ್.ಸಿ ಭಾರತ್ ಗ್ಯಾಸ್ ಏಜೆನ್ಸಿ ಕೊಪ್ಪಳ ವ್ಯಾಪ್ತಿಯ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಎಲ್ಲ ಗೃಹ ಬಳಕೆ ಅನಿಲ ಸಿಲಿಂಡರ್ ಗ್ರಾಹಕರ ಮನೆಗಳಿಗೆ ರೂ.236/- ಗಳ ತಪಾಸಣಾ ಶುಲ್ಕದೊಂದಿಗೆ ಸಿಲಿಂಡರ್ ಸಂಪರ್ಕವನ್ನು ತಪಾಸಣೆ ಮಾಡಬೇಕಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ದೂ.ಸಂ: 08539-222770/222779/221340 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.