ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗ್ತಿದೆ. ಸಬ್ಸಿಡಿ ಪಡೆಯುತ್ತಿರುವವರಿಗೆ ಸ್ವಲ್ಪ ನೆಮ್ಮದಿ ಸಿಕ್ಕಿದೆ. ಆದ್ರೆ ಅನೇಕರು ಎಲ್ಪಿಜಿ ಸಿಲಿಂಡರ್ ಗೆ ಸಬ್ಸಿಡಿ ಪಡೆಯುತ್ತಿದ್ದಾರೆ. ಆದ್ರೆ ಸಬ್ಸಿಡಿ, ಖಾತೆಗೆ ಬರ್ತಿದೆಯಾ ಎಂಬ ಬಗ್ಗೆ ಸರಿಯಾದ ಮಾಹಿತಿ ಅವರಿಗಿಲ್ಲ. ಚಿಂತೆ ಬೇಡ. ಸುಲಭವಾಗಿ ಇದನ್ನು ಚೆಕ್ ಮಾಡಬಹುದು.
ಎಲ್‌ಪಿಜಿ ಸಿಲಿಂಡರ್‌ನ ಸಬ್ಸಿಡಿ ಬಗ್ಗೆ ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಪತ್ತೆ ಮಾಡಬಹುದು. ಮೊದಲು www.mylpg.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಬಲಭಾಗದಲ್ಲಿ, ಮೂರು ಕಂಪನಿಗಳ ಗ್ಯಾಸ್ ಸಿಲಿಂಡರ್‌ಗಳ ಫೋಟೋ ಕಾಣುತ್ತದೆ. ನೀವು ಯಾವ ಕಂಪನಿ ಸಿಲಿಂಡರ್ ಖರೀದಿ ಮಾಡಿದ್ದೀರಿ ಆ ಕಂಪನಿ ಮೇಲೆ ಕ್ಲಿಕ್ ಮಾಡಿ. ಆಗ ಹೊಸ ವಿಂಡೋ ತೆರೆಯುತ್ತದೆ. ಅಲ್ಲಿ, ಗ್ಯಾಸ್ ಸರ್ವೀಸ್ ಪ್ರೊವೈಡರ್ ನ ಮಾಹಿತಿ ಇರುತ್ತದೆ. ಬಲಭಾಗದಲ್ಲಿ ಸೈನ್ ಇನ್ ಮತ್ತು ಹೊಸ ಬಳಕೆದಾರರ ಆಯ್ಕೆ ಇರುತ್ತದೆ. ಅದನ್ನು ಆಯ್ಕೆ ಮಾಡಿ. ಐಡಿ ಈಗಾಗಲೇ ಇದ್ದರೆ ಸೈನ್ ಇನ್ ಮಾಡಬೇಕು. ಐಡಿ ಇಲ್ಲದಿದ್ದರೆ ಹೊಸ ಬಳಕೆದಾರರನ್ನು ಆಯ್ಕೆ ಮಾಡಬೇಕು. ಇದರ ನಂತರ ತೆರೆಯುವ ವಿಂಡೋದ ಬಲಭಾಗದಲ್ಲಿ ಸಿಲಿಂಡರ್ ಬುಕಿಂಗ್ ಇತಿಹಾಸವನ್ನು ವೀಕ್ಷಿಸಿ, ಅದನ್ನು ಆಯ್ಕೆ ಮಾಡಿ. ಸಬ್ಸಿಡಿ ಪಡೆಯುತ್ತೀರೋ ಇಲ್ಲವೋ ಎಂದು ನಿಮಗೆ ತಿಳಿಯುತ್ತದೆ. ಸಬ್ಸಿಡಿ ಬರದೆ ಹೋದಲ್ಲಿ ನೀವು 18002333555 ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಬಹುದು.
ಸರ್ಕಾರ, ಅನೇಕ ಜನರಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ನೀಡುವುದಿಲ್ಲ. ಆಧಾರ್ ಲಿಂಕ್ ಆಗದೆ ಹೋಗಿದ್ದಲ್ಲಿ ಸಬ್ಸಿಡಿ ಸಿಗುವುದಿಲ್ಲ. 10 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವ ಜನರನ್ನು ಸರ್ಕಾರ, ಸಬ್ಸಿಡಿಯಿಂದ ಹೊರಗಿಟ್ಟಿದೆ. ವಾರ್ಷಿಕ ಆದಾಯ 10 ಲಕ್ಷಕ್ಕಿಂತ ಕಡಿಮೆಯಿದ್ದರೆ ನೀವು ಸಬ್ಸಿಡಿಗೆ ಅರ್ಜಿ ಸಲ್ಲಿಸಹುದು. ಸದ್ಯ ಸಬ್ಸಿಡಿ ತುಂಬಾ ಕಡಿಮೆಯಿದೆ. ಕೊರೊನಾ ಅವಧಿಯಲ್ಲಿ, ಗ್ರಾಹಕರ ಖಾತೆಗೆ ಕೇವಲ 10-12 ರೂಪಾಯಿ ಮಾತ್ರ ಸಬ್ಸಿಡಿಯಾಗಿ ಬರುತ್ತಿದೆ. ಒಂದು ಸಮಯದಲ್ಲಿ 200 ರೂಪಾಯಿವರೆಗೆ ಸಬ್ಸಿಡಿ ಸಿಕ್ಕಿತ್ತು.