ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸಬ್ಸಿಡಿ ಕೊಡುವ ಸಂಬಂಧ ಕೇಂದ್ರ ಸರ್ಕಾರ ಹೊಸ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ತಮ್ಮ ಅಡುಗೆ ಅನಿಲವನ್ನು ಮರುಪೂರಣ ಮಾಡಿಕೊಳ್ಳಲು ಗ್ರಾಹಕರು 1000 ರೂ.ಗಳ ವರೆಗೂ ಪಾವತಿ ಮಾಡಲು ಸಿದ್ಧವಿದ್ದಾರೆ ಎಂದು ಸರ್ಕಾರದ ಆಂತರಿಕ ಸಮೀಕ್ಷೆಗಳು ತಿಳಿಸಿದ ಕಾರಣ ಮುಂದಿನ ದಿನಗಳಲ್ಲಿ ಎಲ್‌ಪಿಜಿ ಬೆಲೆ ಇನ್ನಷ್ಟು ಏರುವ ಸಾಧ್ಯತೆ ಇದೆ.
ಸಬ್ಸಿಡಿ ಇಲ್ಲದೆ ಯಾವುದೇ ಗ್ರಾಹಕರಿಗೆ ಬೇಕಾದರೂ ಅಡುಗೆ ಅನಿಲ ಮಾರಾಟ ಮಾಡುವುದು ಹಾಗೂ ಆಯ್ದ ಗ್ರಾಹಕರಿಗೆ ಮಾತ್ರವೇ ಸಬ್ಸಿಡಿ ನೀಡಲು ಭಾರತ ಸರ್ಕಾರ ಚಿಂತನೆ ನಡೆಸಿದೆ. ಸಬ್ಸಿಡಿಗಳನ್ನು ಪಡೆಯಲು ವಾರ್ಷಿಕ ವರಮಾನದ ಆಧಾರದ ಮೇಲೆ ಮಿತಿ ಹೇರುವ ಚಿಂತನೆ ಸರ್ಕಾರದ್ದಾಗಿದೆ.
ನಾನ್ ಸ್ಟಿಕ್ ಪಾತ್ರೆಯಲ್ಲಿ ತಯಾರಿಸಿದ ಆಹಾರ ಹೇಗೆ ಆರೋಗ್ಯ ಹಾಳು ಮಾಡುತ್ತೆ ಗೊತ್ತಾ…..?
ಉದಾಹರಣೆಗೆ ವಾರ್ಷಿಕ 10 ಲಕ್ಷ ರೂ. ವರಮಾನ ಇರುವ ಕುಟುಂಬಗಳು ಸಬ್ಸಿಡಿ ಬಿಟ್ಟುಕೊಡಬೇಕಾಗಬಹುದು. ಇದರಿಂದಾಗಿ ನಿಜಕ್ಕೂ ಅಗತ್ಯವಿರುವ ಮಂದಿಗೆ ಸಬ್ಸಿಡಿಯನ್ನು ಆದ್ಯತೆ ಮೇಲೆ ನೀಡುವ ಚಿಂತನೆ ಸರ್ಕಾರದ್ದು.
ಕೋವಿಡ್ ಸಾಂಕ್ರಾಮಿಕದ ನಡುವೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲದ ಬೆಲೆಗಳು ಏರಿರುವ ಕಾರಣ ಮೇ 2020ರಿಂದ ಎಲ್‌ಪಿಜಿ ಮೇಲೆ ಸಬ್ಸಿಡಿ ಕೊಡುವುದನ್ನು ಸರ್ಕಾರ ನಿಲ್ಲಿಸಿದೆ.