ಯಾವ ವಿತರಕರಿಂದ ತಮ್ಮ ಎಲ್‌ಪಿಜಿ ಸಿಲಿಂಡರ್ ರೀಫಿಲ್ ಮಾಡಿಕೊಳ್ಳಬೇಕು ಎಂದು ನಿರ್ಧರಿಸುವ ವಿವೇಚನೆಯನ್ನು ಗ್ರಾಹಕರಿಗೇ ಬಿಡುವ ಆಯ್ಕೆನ್ನು ಸರ್ಕಾರ ಬಿಟ್ಟಿದೆ.
ಈ ಯೋಜನೆಯನ್ನು ಪೈಲಟ್ ಹಂತದಲ್ಲಿ ಚಂಡೀಗಡ, ಕೊಯಮತ್ತೂರು, ಗುರುಗ್ರಾಮ, ಪುಣೆ ಹಾಗೂ ರಾಂಚಿಯಲ್ಲಿ ಆರಂಭಿಸಲಾಗುವುದು. ಗ್ರಾಹಕರು ತಮಗೆ ಬೇಕಾದ ಡೆಲಿವರಿ ವಿತರಕರನ್ನು ತಾವೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ತಮ್ಮ ತೈಲ ಮಾರುಕಟ್ಟೆ ಕಂಪನಿಯ ಪಟ್ಟಿ ಮೂಲಕ, ಮೊಬೈಲ್ ಅಪ್ಲಿಕೇಶನ್ ಹಾಗೂ ಗ್ರಾಹಕರ ಪೋರ್ಟಲ್ ಮುಖಾಂತರ ಸಂಪರ್ಕಿಸಿ, ವಿತರಕರ ರೇಟಿಂಗ್ ಆಧರಿಸಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಇಂಡೇನ್ ಗ್ರಾಹಕರು https://cx.indianoil.in ಅಥವಾ ಇಂಡಿಯನ್ನ ಆಯಿಲ್ ಒನ್ ಮೊಬೈಲ್ ಅಪ್ಲಿಕೇಶನ್‌ನ ಮೊಬೈಲ್ ಅಪ್ಲಿಕೇಶನ್ ಮೂಲಕ ವಿತರಕರನ್ನು ಆಯ್ದುಕೊಳ್ಳಬಹುದಾಗಿದೆ.
ಭಾರತ್ ಗ್ಯಾಸ್ ಗ್ರಾಹಕರು https://my.ebharatgas.com ಜಾಲತಾಣ ಅಥವಾ ಬಿಪಿಸಿಎಲ್ ಮೊಬೈಲ್ ಅಪ್ಲಿಕೇಶನ್ ಮೂಲಕ ವಿತರಕರನ್ನು ಆಯ್ದುಕೊಳ್ಳಬಹುದಾಗಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಗ್ರಾಹಕರು https://myhpgas.in ಜಾಲತಾಣ ಅಥವಾ ಎಚ್‌ಪಿ ಮೊಬೈಲ್ ಪೇ ಅಪ್ಲಿಕೇಶನ್ ಮೂಲಕ ವಿತರಕರನ್ನು ಆಯ್ದುಕೊಳ್ಳಬಹುದು.
ಆನ್ಲೈನ್ ಮೂಲಕ ಬೇರೊಬ್ಬ ವಿತರಕರಿಂದ ಎಲ್‌ಪಿಜಿ ಸಂಪರ್ಕವನ್ನು ವರ್ಗಾವಣೆ ಮಾಡಿಕೊಳ್ಳುವ ಸೌಲಭ್ಯವನ್ನು ಆಯಾಯಾ ತೈಲ ವಿತರಣಾ ಕಂಪನಿಗಳ ಜಾಲತಾಣಗಳು ಹಾಗೂ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಕೊಡಲಾಗಿದೆ.