ಒಂದೇ ಸಮನೆ ವಸ್ತುಗಳ ಬೆಲೆ ಏರುತ್ತಿದೆ. ಪೆಟ್ರೋಲ್, ಡೀಸೆಲ್ ಏರಿಕೆ ನಂತರ ಎಲ್‌ಪಿಜಿ ಅಡುಗೆ ಸಿಲಿಂಡರ್ ಮೇಲೆ ಬೆಲೆ ಏರಿಕೆ ಪರಿಣಾಮ ಬೀರಲಿದೆ. ಏಪ್ರಿಲ್ ನಂತ್ರ ಅಡುಗೆ ಅನಿಲ ಖರೀದಿದಾರರ ಜೇಬಿಗೆ ಕತ್ತರಿ ಬೀಳಲಿದೆ. ಪ್ರಪಂಚದಾದ್ಯಂತ ಅಡುಗೆ ಅನಿಲದ ಕೊರತೆಯುಂಟಾಗಿದೆ. ಇದ್ರ ಪರಿಣಾಮ ಏಪ್ರಿಲ್‌ಯಿಂದ ಭಾರತದಲ್ಲಿ ಗೋಚರಿಸಲಿದೆ ಎನ್ನಲಾಗ್ತಿದೆ. ಭಾರತದಲ್ಲಿ ಏಪ್ರಿಲ್ ನಂತ್ರ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕಾಣಲಿದೆ.
ಜಾಗತಿಕ ಅನಿಲದ ಕೊರತೆಯಿಂದಾಗಿ, ಸಿಎನ್‌ಜಿ, ಪಿಎನ್‌ಜಿ ಮತ್ತು ವಿದ್ಯುತ್ ಬೆಲೆಗಳು ಹೆಚ್ಚಾಗಲಿವೆ. ರಷ್ಯಾ ಮತ್ತು ಯುರೋಪ್ ಅನಿಲ ಪೂರೈಕೆಯ ಪ್ರಮುಖ ಮೂಲವಾಗಿದೆ. ಉಕ್ರೇನ್ ಬಿಕ್ಕಟ್ಟು ಅನಿಲದ ಮೇಲೆ ಪರಿಣಾಮ ಬೀರಿದೆ. ಉಕ್ರೇನ್ ಬಿಕ್ಕಟ್ಟಿನಿಂದಾಗಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಅನಿಲಕ್ಕೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ. ಇದ್ರಿಂದಾಗಿ ಬೆಲೆಗಳು ಹೆಚ್ಚಾಗ್ತಿವೆ. ವಿದೇಶಗಳಲ್ಲಿ ಈಗಾಗಲೇ ಇದ್ರ ಪರಿಣಾಮ ಕಾಣಿಸ್ತಿದೆ.
ತಜ್ಞರ ಪ್ರಕಾರ, ಪ್ರತಿ ಎಂಎಂಬಿಟಿಯುಗೆ 2.9 ಡಾಲರ್ ಇದ್ದ ಬೆಲೆ 6 ರಿಂದ 7 ಡಾಲರ್ ಹೆಚ್ಚಾಗುವ ಸಾಧ್ಯತೆಯಿದೆ. ಏಪ್ರಿಲ್ ನಲ್ಲಿ ಇದ್ರ ಬೆಲೆ ಏರಿಕೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ.