ಎಲ್ಪಿಜಿ ದರಗಳ ಬೆಲೆ ನಿರಂತರವಾಗಿ ಏರಿಕೆ ಕಾಣ್ತಿದೆ. ಪೆಟ್ರೋಲ್-ಡೀಸೆಲ್ ಮಧ್ಯೆ ಎಲ್‌ಪಿಜಿ ದರ ಏರಿಕೆ ಜನ ಸಾಮಾನ್ಯರನ್ನು ಸಂಕಷ್ಟಕ್ಕೆ ನೂಕಿದೆ. ಅಡುಗೆ ಖರ್ಚು ಕಡಿಮೆ ಮಾಡ್ಬೇಕೆಂದ್ರೆ ದುಬಾರಿ ಎಲ್ಪಿಜಿ ಬದಲು ವಿದ್ಯುತ್ ಉಪಕರಣಗಳ ಮೊರೆ ಹೋಗುವುದು ಅತ್ಯುತ್ತಮ.
ಎಲ್‌ಪಿಜಿಗಿಂತ ವಿದ್ಯುತ್ ಉಪಕರಣಗಳು ಅಗ್ಗವಾಗಿವೆ. ಎಲೆಕ್ಟ್ರಿಕ್ ಕುಕ್ಕರ್, ಇಂಡಕ್ಷನ್ ಅಥವಾ ಎಲೆಕ್ಟ್ರಿಕ್ ಸ್ಟೌವ್‌ನೊಂದಿಗೆ ಹೋಲಿಸಿದರೆ ಎಲ್‌ಪಿಜಿ ದುಬಾರಿ. ಪಿಎನ್‌ಜಿ ಸಹ ಎಲ್‌ಪಿಜಿಗಿಂತ ಶೇಕಡಾ 60 ರಷ್ಟು ಅಗ್ಗವಾಗುತ್ತಿದೆ. ವಿಶ್ವ ಸಂಪನ್ಮೂಲ ಸಂಸ್ಥೆಯ ಸಹಾಯಕ ನಿರ್ದೇಶಕ ದೀಪಕ್ ಶ್ರೀರಾಮಕೃಷ್ಣನ್ ಪ್ರಕಾರ, ಎಲ್‌ಪಿಜಿಗಿಂತ ದೆಹಲಿಯಲ್ಲಿ ವಿದ್ಯುತ್ ಉಪಕರಣದಲ್ಲಿ ಅಡುಗೆ ಮಾಡುವುದು ಅಗ್ಗ ಎಂದಿದ್ದಾರೆ.
ದೆಹಲಿಯಲ್ಲಿ ವಿದ್ಯುತ್ ದರ ಯುನಿಟ್‌ಗೆ 8 ರೂಪಾಯಿ. ಆದರೆ ಗ್ಯಾಸ್ ಸಿಲಿಂಡರ್ ಬೆಲೆ 843 ರೂಪಾಯಿ. 10 ಲೀಟರ್ ನೀರು ಕುದಿಸಲು ಎಲ್ಪಿಜಿಯಲ್ಲಿ 10.15 ರೂಪಾಯಿ ಖರ್ಚಾಗುತ್ತದೆ. ವಿದ್ಯುತ್ ಒಲೆಯಲ್ಲಿ ಬಿಸಿ ಮಾಡಿದರೆ 9.46 ರೂಪಾಯಿ ಖರ್ಚಾಗುತ್ತದೆ. ಜುಲೈ 1ರಿಂದ ಎಲ್ಪಿಜಿ ಸಿಲಿಂಡರ್ ಬೆಲೆ 140 ರೂಪಾಯಿ ಹೆಚ್ಚಾಗಿದೆ. 2020 ರಲ್ಲಿ ಎಲ್‌ಪಿಜಿಗೆ ನೀಡಿದ್ದ ಸಬ್ಸಿಡಿಯನ್ನು ಸರ್ಕಾರ ರದ್ದುಗೊಳಿಸಿದ್ದು, ಬಹುತೇಕ ಗ್ರಾಹಕರು ಪೂರ್ಣ ಬೆಲೆ ಪಾವತಿಸುತ್ತಿದ್ದಾರೆ.