ಕೇವಲ 9 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ ಖರೀದಿಸಲು ಕೊನೆ ಅವಕಾಶವಿದೆ. ಕೇವಲ 809 ರೂಪಾಯಿ ಸಿಲಿಂಡರನ್ನು ನೀವು 9 ರೂಪಾಯಿಗೆ ಖರೀದಿಸಬಹುದಾಗಿದೆ. ಪೇಟಿಎಂ ಈ ಆಫರ್ ನೀಡ್ತಿದ್ದು, ಮೇ 31ರಂದು ಇದು ಕೊನೆಗೊಳ್ಳಲಿದೆ.
ಪೇಟಿಎಂ ಇದಕ್ಕೆ ಫಸ್ಟ್ ಟೈಂ ಎಂದು ಹೆಸರಿಟ್ಟಿದೆ. ಅಂದ್ರೆ ಮೊದಲ ಬಾರಿ ಪೇಟಿಎಂ ಮೂಲಕ ಸಿಲಿಂಡರ್ ಬುಕ್ ಮಾಡುವವರು ಮಾತ್ರ ಈ ಆಫರ್ ಲಾಭ ಪಡೆಯಲಿದ್ದಾರೆ. ಹಳೆ ಗ್ರಾಹಕರಿಗೆ ಈ ಆಫರ್ ನ ಲಾಭ ಸಿಗುವುದಿಲ್ಲ. ಬುಕ್ಕಿಂಗ್ ಮಾಡಿದ 24 ಗಂಟೆಯಲ್ಲಿ ನಿಮಗೆ ಕ್ಯಾಶ್ಬ್ಯಾಕ್ ಸಿಗಲಿದೆ. ಈ ಸ್ಕ್ರ್ಯಾಚ್ ಕಾರ್ಡನ್ನು ನೀವು 7 ದಿನಗಳಲ್ಲಿ ಬಳಸಬೇಕು.
ಮೊದಲು ಪೇಟಿಎಂ ಅಪ್ಲಿಕೇಷನ್ ಡೌನ್ಲೋಡ್ ಮಾಡಬೇಕು. ನಂತ್ರ ಗ್ಯಾಸ್ ಏಜೆನ್ಸಿಗೆ ಹೋಗಿ ಸಿಲಿಂಡರ್ ಬುಕ್ ಮಾಡಬೇಕು. ಪೇ ಬಿಲ್ ಮಾಡುವಾಗ ಪೇಟಿಎಂ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅಲ್ಲಿಂದ ಹಣ ಪಾವತಿ ಮಾಡಬೇಕು. ಪಾವತಿ ನಂತ್ರ ಪೇಟಿಎಂ ಎಷ್ಟು ಕ್ಯಾಶ್ಬ್ಯಾಕ್ ಬಂದಿದೆ ಎಂಬುದನ್ನು ತೋರಿಸಲಿದೆ. 10 ರೂಪಾಯಿಯಿಂದ 800 ರೂಪಾಯಿವರೆಗೆ ನಿಮಗೆ ಕ್ಯಾಶ್ಬ್ಯಾಕ್ ಸಿಗಲಿದೆ.