ಎಲ್ಪಿಜಿ ಸಿಲಿಂಡರ್ ಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ಆದ್ರೆ ಸರ್ಕಾರ ನೀಡುವ ಸಬ್ಸಿಡಿ ಬಗ್ಗೆ ಜನರಿಗೆ ಅನೇಕ ಪ್ರಶ್ನೆಗಳಿವೆ. ಅನೇಕ ಜನರು ತಮ್ಮ ಖಾತೆಗೆ ಯಾವುದೇ ಸಬ್ಸಿಡಿ ಬಂದಿಲ್ಲವೆಂದು ದೂರು ನೀಡ್ತಾರೆ. ಸರ್ಕಾರ, ಗ್ಯಾಸ್ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಿದೆ ಎಂದು ಅನೇಕ ಗ್ರಾಹಕರು ಭಾವಿಸುತ್ತಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಮೋದಿ ಸರ್ಕಾರ, ಎಲ್‌ಪಿಜಿಯ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಿದೆಯೇ ಎಂದು ಗ್ರಾಹಕರೊಬ್ಬರು ಟ್ವೀಟ್ ಮಾಡಿದ್ದರು. ಕಳೆದ 18 ತಿಂಗಳಿಂದ ಖಾತೆಗೆ ಸಬ್ಸಿಡಿ ಬಂದಿಲ್ಲ ಎಂದಿದ್ದರು. ಇದಕ್ಕೆ ಪೆಟ್ರೋಲಿಯಂ ಸಚಿವಾಲಯ ಉತ್ತರ ನೀಡಿದೆ.
ಪ್ರಿಯ ಗ್ರಾಹಕರೆ, ಸಬ್ಸಿಡಿ ರದ್ದುಪಡಿಸಲಾಗಿಲ್ಲ. ಪ್ರಸ್ತುತ ದೇಶೀಯ ಎಲ್‌ಪಿಜಿ ಗ್ಯಾಸ್ ಮೇಲಿನ ಸಬ್ಸಿಡಿಯು ಬೇರೆ ಬೇರೆಯಾಗಿದೆ. ಸಬ್ಸಿಡಿ, ಮಾರುಕಟ್ಟೆಯಿಂದ ಮಾರುಕಟ್ಟೆಗೆ ಬದಲಾಗುತ್ತದೆ. 2014 ರ ಪ್ರಕಾರ, ಸಬ್ಸಿಡಿ ಮೊತ್ತವನ್ನು, ಸಬ್ಸಿಡಿ ಸಿಲಿಂಡರ್ ಬೆಲೆ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ನ ಮಾರುಕಟ್ಟೆ ನಿರ್ಧಾರಿತ ಬೆಲೆ ನಡುವಿನ ವ್ಯತ್ಯಾಸದಿಂದ ನಿರ್ಧರಿಸಲಾಗುತ್ತದೆ ಎಂದು ಟ್ವೀಟ್ ಮಾಡಲಾಗಿದೆ.
ಎಲ್ಪಿಜಿ, ಸಬ್ಸಿಡಿಗೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಯಾವುದೇ ಇತರ ದೂರುಗಳಿದ್ದರೆ ಅದನ್ನು ನೇರವಾಗಿ ಗ್ರಾಹಕ ಸೇವಾ ಸೆಲ್ 011-23322395, 23322392, 23312986, 23736051, 23312996 ಗೆ ಕರೆ ಮಾಡಿ ಮಾಹಿತಿ ಪಡೆಯಿರಿ. ಬೆಳಿಗ್ಗೆ 9 ಗಂಟೆಯಿಂದ 5 ಗಂಟೆಯವರೆಗೆ ಕರೆ ಮಾಡಬಹುದೆಂದು ಸಚಿವಾಲಯ ಹೇಳಿದೆ.
ನಿಮ್ಮ ಖಾತೆಗೆ ಸಬ್ಸಿಡಿ ಬಂದಿದೆಯೇ ಎಂಬುದನ್ನು ಸುಲಭವಾಗಿ ಪರಿಶೀಲಿಸಬಹುದು
ಇಂಡೇನ್‌ನ ಸಿಲಿಂಡರ್ ಗ್ರಾಹಕರು, ಮೊದಲು ಇಂಡಿಯನ್ ಆಯಿಲ್ ವೆಬ್‌ಸೈಟ್ indianoil.in ಗೆ ಹೋಗಿ ಲಾಗಿನ್ ಆಗಿ. ಅಲ್ಲಿ ಎಲ್ಪಿಜಿ ಸಿಲಿಂಡರ್‌ನ ಫೋಟೋ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
ಇದರ ನಂತರ ದೂರು ಪೆಟ್ಟಿ ತೆರೆಯುತ್ತದೆ. ಅಲ್ಲಿ ಸಬ್ಸಿಡಿ ಸ್ಥಿತಿ ಎಂದು ಬರೆದು, ಮುಂದುವರೆಸಿ ಕ್ಲಿಕ್ ಮಾಡಬೇಕು. ಸಬ್ಸಿಡಿ ಸಂಬಂಧಿತ ಆಯ್ಕೆಯ ಮೇಲೆ ಕ್ಲಿಕ್ ಮಾಡಿದ ನಂತ್ರ ಸಬ್ಸಿಡಿ ಪಡೆದಿಲ್ಲ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಹೊಸ ಬಾಕ್ಸ್ ನಿಮಗೆ ಕಾಣಿಸುತ್ತದೆ.
ಅದ್ರಲ್ಲಿ ಎರಡು ಬಾಕ್ಸ್ ಕಾಣಿಸುತ್ತದೆ. ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಎಲ್ಪಿಜಿ ಐಡಿ ನಮೂದಿಸಬೇಕು. ನಂತ್ರ ಪರಿಶೀಲಿಸಿ ಬಟನ್ ಕ್ಲಿಕ್ ಮಾಡಿ. ಬುಕಿಂಗ್ ದಿನಾಂಕ ಮತ್ತು ಇತರ ವಿವರಗಳನ್ನು ತುಂಬಿದ ತಕ್ಷಣ ಸಬ್ಸಿಡಿ ಮಾಹಿತಿ ಲಭ್ಯವಾಗುತ್ತದೆ.