ಈಗ ಪ್ರತಿ ಮನೆಯಲ್ಲೂ ಅಡುಗೆಗೆ ಗ್ಯಾಸ್ ಸಿಲಿಂಡರ್ ಬಳಸ್ತಾರೆ. ಇದಕ್ಕಾಗಿ ಗ್ಯಾಸ್ ಕನೆಕ್ಷನ್ ಪಡೆಯುವುದು ಅವಶ್ಯಕ. ಗ್ಯಾಸ್ ಸಂಪರ್ಕಕಕ್ಕಾಗಿ ಮೊದಲು ಅರ್ಜಿ ಸಲ್ಲಿಸಬೇಕು. ಹೊಸ ಗ್ಯಾಸ್ ಕನೆಕ್ಷನ್‌ಗಾಗಿ ನೀವು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಬಯಸಿದ್ರೆ ಹತ್ತಿರದ ಡೀಲರ್/ವಿತರಕರ ಕಚೇರಿಗೆ ಹೋಗಿ ಅರ್ಜಿ ನಮೂನೆಯನ್ನು ಕೇಳಬೇಕು. ಅರ್ಜಿ ನಮೂನೆಯು ಸಂಪೂರ್ಣ ಪ್ರಕ್ರಿಯೆಗೆ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಒಳಗೊಂಡಿರುತ್ತದೆ.
ಇದರೊಂದಿಗೆ ನೀವು ಕೆಲವು ದಾಖಲೆಗಳನ್ನು ಸಹ ಸಲ್ಲಿಸಬೇಕಾಗುತ್ತದೆ, ಅದಿಲ್ಲದೇ ನೀವು ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ಗ್ಯಾಸ್ ಕನೆಕ್ಷನ್‌ಗಾಗಿ ಐಡಿ ಪ್ರೂಫ್, ಅಡ್ರೆಸ್ ಪ್ರೂಫ್ ಮತ್ತು ಫೋಟೋ ಬೇಕಾಗುತ್ತದೆ. ಅರ್ಜಿ ನಮೂನೆಯೊಂದಿಗೆ ಈ ದಾಖಲೆಗಳ ಪ್ರತಿಗಳನ್ನು ಸಲ್ಲಿಸಬೇಕು. ಹೊಸ ಗ್ಯಾಸ್ ಸಂಪರ್ಕಕ್ಕೆ ಯಾವ ದಾಖಲೆಗಳು ಬೇಕಾಗುತ್ತವೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಹೊಸ ಗ್ಯಾಸ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಅಗತ್ಯವಾದ ದಾಖಲೆಗಳು
ಹೊಸ ಎಲ್‌ಪಿಜಿ ಗ್ಯಾಸ್ ಸಂಪರ್ಕಕ್ಕೆ ಐಡೆಂಟಿಟಿ ಕಾರ್ಡ್ ಅಗತ್ಯವಿದೆ. ID ಪುರಾವೆಯಾಗಿ ಈ ಕೆಳಗಿನವುಗಳಲ್ಲಿ ಒಂದನ್ನಾದರೂ ಹೊಂದಿರಬೇಕು-
– ಪಾಸ್ಪೋರ್ಟ್
– ಆಧಾರ್ ಕಾರ್ಡ್
– ಪ್ಯಾನ್ ಕಾರ್ಡ್
– ಮತದಾರರ ಗುರುತಿನ ಚೀಟಿ
– ಕೇಂದ್ರ ಅಥವಾ ರಾಜ್ಯ ಸರ್ಕಾರ ನೀಡಿದ ಐಡಿ ಪುರಾವೆ
-ಚಾಲನಾ ಪರವಾನಿಗೆ
– ಫೋಟೋದೊಂದಿಗೆ ಬ್ಯಾಂಕ್ ಪಾಸ್ಬುಕ್
ಅಡ್ರೆಸ್ ಪ್ರೂಫ್‌ಗಳು
– ಆಧಾರ್ ಕಾರ್ಡ್
– ಚಾಲನಾ ಪರವಾನಿಗೆ
– ಪಾಸ್ಪೋರ್ಟ್
– ಗುತ್ತಿಗೆ ಒಪ್ಪಂದ / ಬಾಡಿಗೆ ಒಪ್ಪಂದ
– ಮತದಾರರ ಗುರುತಿನ ಚೀಟಿ
– ಪಡಿತರ ಚೀಟಿ
– ಗುತ್ತಿಗೆ ಒಪ್ಪಂದ
– ಯುಟಿಲಿಟಿ ಬಿಲ್ (ದೂರವಾಣಿ / ವಿದ್ಯುತ್ / ನೀರಿನ ಬಿಲ್)
– ಬ್ಯಾಂಕ್ ಸ್ಟೇಟ್ಮೆಂಟ್ / ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್
– ಮನೆ ನೋಂದಣಿ ದಾಖಲೆಗಳು
– ಗೆಜೆಟೆಡ್ ಅಧಿಕಾರಿ ಮೂಲಕ ದೃಢೀಕರಿಸಿದ ಸ್ವಯಂ ಘೋಷಣೆ