ಹಾಸನ: ಮದುವೆಗೆ ಪೋಷಕರ ವಿರೋಧ ಹಿನ್ನೆಲೆ ವಿಷ ಸೇವಿಸಿ ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಘಟನೆ ನಡೆದಿದೆ.
ಹೊಳೆನರಸೀಪುರ ತಾಲೂಕು ನಗರಹಳ್ಳಿ ಗ್ರಾಮದ ರಾಜು(24) ಮೃತಪಟ್ಟವರು ಎಂದು ಹೇಳಲಾಗಿದೆ. ಹೊಳೆನರಸೀಪುರ ಮೂಲದ ಅಪ್ರಾಪ್ತೆಯನ್ನು ರಾಜು ಪ್ರೀತಿಸುತ್ತಿದ್ದರು. ಮದುವೆಗೆ ನಿರಾಕರಿಸಿದ ಪೋಷಕರು ಅಪ್ರಾಪ್ತೆಗೆ ಬುದ್ಧಿವಾದ ಹೇಳಿದ್ದರು. ನಿನ್ನೆ ಮಧ್ಯಾಹ್ನ ವಿಷ ಸೇವಿಸಿ ಇಬ್ಬರೂ ರೈಲ್ವೆ ಹಳಿ ಮೇಲೆ ಮಲಗಿದ್ದಾರೆ.
ಹೇಮಾವತಿ ನದಿ ಸೇತುವೆ ಬಳಿ ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದ ಇಬ್ಬರನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಿಎಸ್ಐ ಅಜಯಕುಮಾರ್ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಿಮ್ಸ್ ಪ್ರೇಮಿಗಳನ್ನು ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ತಡರಾತ್ರಿ ರಾಜು ಸಾವನ್ನಪ್ಪಿದ್ದಾರೆ. ಹೊಳೆನರಸೀಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.