alex Certify ಪ್ರೀತಿಸಿ ಮದುವೆಯಾದರೂ ಸಿಗಲಿಲ್ಲ ನೆಮ್ಮದಿ; ಕುಟುಂಬದವರ ಕಿರುಕುಳಕ್ಕೆ ಬೇಸತ್ತು ಒಟ್ಟಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ ಯುವ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೀತಿಸಿ ಮದುವೆಯಾದರೂ ಸಿಗಲಿಲ್ಲ ನೆಮ್ಮದಿ; ಕುಟುಂಬದವರ ಕಿರುಕುಳಕ್ಕೆ ಬೇಸತ್ತು ಒಟ್ಟಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ ಯುವ ಜೋಡಿ

Lovers who got married by hanging committed suicide

ಪ್ರೀತಿಸಿ ಮದುವೆಯಾದ ಜೋಡಿಯೊಂದು ಉಭಯ ಕುಟುಂಬಸ್ಥರ ಕಿರುಕುಳಕ್ಕೆ ಬೇಸತ್ತು ತಮ್ಮ ಜಮೀನಿನಲ್ಲಿಯೇ ಮರಕ್ಕೆ ಒಟ್ಟಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಗರಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

22 ವರ್ಷದ ಮಹೇಶ್ ಹಾಗೂ 20 ವರ್ಷದ ಭಾನುಮತಿ ಸಾವನ್ನಪ್ಪಿದವರಾಗಿದ್ದು, ನಗರಕರ್ನೂಲ್ ಜಿಲ್ಲೆ ಬಲ್ಮುರು ಮಂಡಲ್ ವ್ಯಾಪ್ತಿಯ ಜಿನುಕುಂಟ ಗ್ರಾಮದವರಾದ ಇವರಿಬ್ಬರು ಬಹುಕಾಲದಿಂದ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಇವರ ಪ್ರೀತಿಗೆ ಇಬ್ಬರ ಕುಟುಂಬದಿಂದಲೂ ವಿರೋಧ ವ್ಯಕ್ತವಾಗಿತ್ತು.

ಇದ್ಯಾವುದಕ್ಕೂ ಮಣಿಯದ ಅವರು ಇತ್ತೀಚೆಗೆ ಮದುವೆ ಮಾಡಿಕೊಂಡಿದ್ದು, ಅದೇ ಗ್ರಾಮದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಇಷ್ಟಾದರೂ ಕುಟುಂಬಸ್ಥರ ಕಿರುಕುಳ ತಪ್ಪಿರಲಿಲ್ಲ. ಶನಿವಾರ ಸಂಜೆ ಮಹೇಶನ ತಂದೆ ಮತ್ತೆ ಗಲಾಟೆ ಮಾಡಿದ್ದು, ಇದರಿಂದ ಬೇಸತ್ತ ಜೋಡಿ ಭಾನುವಾರ ಬೆಳಗಿನ ಜಾವ ತಮ್ಮದೇ ಜಮೀನಿನಲ್ಲಿದ್ದ ಮರಕ್ಕೆ ಒಟ್ಟಿಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...