
ರಾಮನಗರ: ಮದುವೆಗೆ ಮನೆಯಲ್ಲಿ ನಿರಾಕರಿಸಿದ್ದರಿಂದ ನೊಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದಲ್ಲಿ ನಡೆದಿದೆ.
ಹರೀಶ್(26) ಮತ್ತು ಗುಡ್ಡದಹಳ್ಳಿ ಗ್ರಾಮದ 16 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡವರು ಎಂದು ಹೇಳಲಾಗಿದೆ. ರಾಮನಗರದಲ್ಲಿ ಕಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹರೀಶ್ ಎಸೆಸೆಲ್ಸಿ ಓದುತ್ತಿದ್ದ ಬಾಲಕಿಯನ್ನು ಪ್ರೀತಿಸಿದ್ದು, ಇಬ್ಬರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು. ಮನೆ ಬಿಟ್ಟು ಬಂದ ಬಾಲಕಿಯನ್ನು ಹರೀಶ್ ಮನೆಗೆ ಕರೆದುಕೊಂಡು ಬಂದಾಗ ಮನೆಯವರು ಒಪ್ಪಿರಲಿಲ್ಲ ಎನ್ನಲಾಗಿದೆ.
ಇದರಿಂದ ಮನನೊಂದ ಪ್ರೇಮಿಗಳು ಮೈಸೂರು –ಬೆಂಗಳೂರು ಹೆದ್ದಾರಿ ಪಕ್ಕದ ಅರಣ್ಯದಲ್ಲಿ ಒಂದೇ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಬಾಲಕಿಯ ಕುತ್ತಿಗೆಗೆ ಹರೀಶ್ ಅರಿಶಿನದ ಕೊಂಬು ಕಟ್ಟಿದ್ದಾನೆ. ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.