
ಚಿಕ್ಕಬಳ್ಳಾಪುರ: ಕೃಷಿ ಹೊಂಡಕ್ಕೆ ಹಾರಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಎಂ. ಮುದ್ದಲಹಳ್ಳಿಯಲ್ಲಿ ನಡೆದಿದೆ.
ವೇಣು(21), ಅನುಷಾ(19) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎನ್ನಲಾಗಿದೆ. ಎಂ. ಮುದ್ದಲಹಳ್ಳಿ ಗ್ರಾಮದ ವೇಣು ಮತ್ತು ಕಾಚಹಳ್ಳಿ ನಿವಾಸಿ ಅನುಷಾ ಪ್ರೀತಿಸಿದ್ದರು. ಜಾತಿಯ ನೆಪವೊಡ್ಡಿ ಅನುಷಾ ಪೋಷಕರು ಮದುವೆಗೆ ನಿರಾಕರಿಸಿದ್ದರು. ಒಂದು ತಿಂಗಳ ಬೇರೆ ವ್ಯಕ್ತಿಯ ಜೊತೆ ಅನುಷಾಗೆ ಮದುವೆಯಾಗಿತ್ತು. ಆಷಾಢ ಮಾಸಕ್ಕೆ ತವರು ಮನೆಗೆ ಬಂದಿದ್ದ ಅನುಷಾ ಎಂ. ಮುದ್ದಲಹಳ್ಳಿಗೆ ಬಂದು ಪ್ರಿಯಕರ ವೇಣು ಭೇಟಿಯಾಗಿದ್ದಾರೆ.
ಮುದ್ದಲಹಳ್ಳಿ ಬಳಿಯ ಕೃಷಿಯ ಹೊಂಡಕ್ಕೆ ಹಾರಿ ಜೋಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.