
ಕಲ್ಬುರ್ಗಿ: ಫೆಬ್ರವರಿ 14 ರ ಪ್ರೇಮಿಗಳ ದಿನ ಆಚರಿಸಬಾರದು ಎಂದು ಹಿಂದು ಜಾಗೃತಿ ಸೇನೆ ಕಾರ್ಯಕರ್ತರು ಕರೆ ನೀಡಿದ್ದು, ಭಾನುವಾರ ಕಲಬುರ್ಗಿಯ ವಿವಿಧ ಪಾರ್ಕ್ ಗಳಲ್ಲಿ ನಿಗಾವಹಿಸಿದ್ದಾರೆ.
ಸಂಘಟನೆಯ ಕಾರ್ಯಕರ್ತರು ಪಾರ್ಕ್ ವೊಂದರಲ್ಲಿ ಜೊತೆಯಾಗಿದ್ದ ಜೋಡಿಯ ಮದುವೆ ಮಾಡಿದ್ದಾರೆ. ಕಲ್ಬುರ್ಗಿಯ ಪಬ್ಲಿಕ್ ಗಾರ್ಡನ್, ಕೆಸರಟಗಿ ಪಾರ್ಕ್, ಕಿರು ಮೃಗಾಲಯ ಸೇರಿದಂತೆ ಹಲವೆಡೆ ಹಿಂದು ಜಾಗೃತಿ ಸೇನೆ ಕಾರ್ಯಕರ್ತರು ನಿಗಾವಹಿಸಿದ್ದು, ಅಲ್ಲಿಗೆ ಬಂದ ಪ್ರೇಮಿಗಳನ್ನು ಕಳುಹಿಸಿದ್ದಾರೆ. ಪಬ್ಲಿಕ್ ಗಾರ್ಡನ್ ನಲ್ಲಿ ಜೊತೆಯಾಗಿದ್ದ ಜೋಡಿಯೊಂದಕ್ಕೆ ಪರಸ್ಪರ ಹಾರ ಬದಲಿಸಿ ಮದುವೆ ಮಾಡಿಸಿದ್ದಾರೆ ಎಂದು ಹೇಳಲಾಗಿದೆ.