ಬೆಂಗಳೂರು: ಇಡೀ ರಾಜ್ಯವೇ ಬೆಚ್ಚಿ ಬೀಳುವಂತಹ ಭ್ರೂಣ ಹತ್ಯೆ ಪ್ರಕರಣದ ಜಾಲವನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದರು. ಈ ಘಟನೆ ಬೆನ್ನಲ್ಲೇ ಇದೀಗ ಯುವತಿಯೊಬ್ಬರು ತನ್ನ ಪ್ರಿಯಕರನ ವಿರುದ್ಧ ಭ್ರೂಣ ಹತ್ಯೆ ದೂರು ನೀಡಿದ್ದಾರೆ.
ಮದುವೆಯಾಗುವುದಾಗಿ ನಂಬಿಸಿ ಪ್ರೀತಿ ಪ್ರೇಮದ ಹೆಸರಲ್ಲಿ ಮೋಸ ಮಾಡಿರುವ ಪ್ರಿಯತಮ ತನ್ನ ಗರ್ಭದಲ್ಲಿ ಬೆಳೆಯುತ್ತಿದ್ದ ಭ್ರೂಣವನ್ನು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ಹಾಸನ ಪೊಲೀಸರಿಗೆ ದೂರು ನೀಡಿದ್ದಾಳೆ.
ಬಾಲಕೃಷ್ಣ ಸುನೀಲ್ ಎಂಬಾತ ತನ್ನನ್ನು ಕಳೆದ 6 ವರ್ಷಗಳಿಂದ ಪ್ರೀತಿಸಿಸುತ್ತಿದ್ದ. ಬೆಂಗಳೂರಿನಲ್ಲಿ ಗಂಡ-ಹೆಂಡತಿಯಂತೆ ಒಟ್ಟಿಗೆ ವಾಸವಾಗಿದ್ದೆವು. ತಾನು ಗರ್ಭವತಿಯಾಗುತ್ತಿದ್ದಂತೆ ಭ್ರೂಣ ಹತ್ಯೆ ಮಾಡಿಸಿರುವ ಬಾಲಕೃಷ್ಣ ಸುನೀಲ್ ಈಗ ಬೇರೆ ಮದುವೆಯಾಗಿ ಹಾಸನ ಜಿಲ್ಲೆಯ ಸಕಲೇಶಪುರದ ಅಲಗಟ್ಟಿಯಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ. ತನಗೆ ನ್ಯಾಯ ಕೊಡಿಸುವಂತೆ ಯುವತಿ ಮಾನವಿ ಮಾಡಿದ್ದಾಳೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಬೆಂಗಳೂರು ನಗರ ಪೊಲೀಸ್ ಆಯುಕ್ತ, ಹಾಸನ ಪೊಲೀಸರಿಗೆ ದೂರು ನೀಡಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಟ್ಯಾಗ್ ಮಾಡಿದ್ದಾಳೆ.