
ಬೆಂಗಳೂರು: ಪ್ರಿಯತಮನನ್ನು ಭೇಟಿಯಾಗಲೆಂದು ಕರೆದಿದ್ದ ಪ್ರಿಯತಮೆ ಆತನನ್ನೇ ಕಿಡ್ನ್ಯಾಪ್ ಮಡಿರುವ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಆಂಧ್ರಪ್ರದೇಶದ ನಲ್ಲೂರಿನ ಶಿವ ಹಾಗೂ ಮೋನಿಕಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮೋನಿಕಾ, ತನ್ನ ಪ್ರಿಯತಮ ಶಿವನಿಗೆ ಕರೆ ಮಾಡಿ ನನ್ನ ಸ್ನೇಹಿತರು ನಿನ್ನ ನೋಡಬೇಕೆಂತೆ ಬಾ ಎಂದು ಕರೆದಿದ್ದಾಳೆ. ಹೀಗೆ ಬರುವಾಗ ನಿನ್ನ ಬಳಿ ಇರುವ ಚಿನ್ನಾಭರಣ ಹಾಕಿಕೊಂಡು ಕಾರಿನಲ್ಲಿ ಬರಬೇಕು ಎಂದಿದ್ದಾಳೆ. ಪ್ರಿಯತಮೆ ಮಾತು ನಂಬಿದ ಪ್ರಿಯಕರ ಶಿವ, 60 ಗ್ರಾಮ್ ಚಿನ್ನಭರಣಗಳ ಜೊತೆಗೆ ಇನ್ನೋವಾ ಕಾರಿನಲ್ಲಿ ಬಂದಿದ್ದಾನೆ.
ಆಭರಣಗಳೊಂದಿಗೆ ಕಾರಿನಲ್ಲಿ ಬಂದ ಶಿವನನ್ನು ಭೇಟಿಯಾದ ಮೋನಿಕಾ ಹಾಗೂ ಗ್ಯಾಂಗ್ ಆತನನ್ನು ಕಿಡ್ನ್ಯಾಪ್ ಮಾಡಿದೆ. ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ, 10 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದೆ. 5 ಲಕ್ಷ ಹಣ ಕೊಡಲು ಶಿವ ಒಪ್ಪಿದ್ದಾನೆ. ಬಳಿಕ ಬೆಂಗಳೂರಿನ ಮೆಜೆಸ್ಟಿಕ್, ಕೋರಮಂಗಲಕ್ಕೆ ಕರೆದೊಯ್ದು ಅಲ್ಲಿ ಎಟಿಎಂ ನಿಂದ ಹಣ ಡ್ರಾ ಮಾಡಿಸಿಕೊಳ್ಳುತ್ತಿದ್ದ ವೇಳೆ ಆರೋಪಿಗಳ ಮಧ್ಯೆ ಗಲಾಟೆಶುರುವಾಗಿದೆ.
ಈ ವೇಳೆ ರೌಂಡ್ಸ್ ನಲ್ಲಿದ್ದ ಪಿಎಸ್ ಐ ಮಾದೇಶ್ ಅನುಮನಗೊಂಡು ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್ ಹಾಗೂ ಸುಲಿಗೆ ಪ್ರಕರನ ಬಯಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋರಮಗಲ ಪೊಲೀಸರು, ಮೋನಿಕಾ, ಹರೀಶ್, ಹರಿಕೃಷ್ಣ, ನರೇಶ್, ರಾಜ್ ಕುಮಾರ್, ನರಸಿಂಹ, ಅಂಜನೀಲ್ ನನ್ನು ಬಂಧಿಸಿದ್ದಾರೆ. ಪ್ರಿಯತಮೆಯೇ ಈ ಗ್ಯಾಂಗ್ ನ ಕಿಂಗ್ ಪಿಎನ್ ಎಂಬುದು ಗೊತ್ತಾಗುತ್ತಿದ್ದಂತೆ ಶಿವ ಶಾಕ್ ಆಗಿದ್ದಾನೆ.