ಬ್ರೇಕಪ್ ಸ್ಟೋರಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಬ್ರೇಕಪ್ ಮಾಡಿಕೊಂಡ ಯುವತಿಗೆ ಈವರೆಗೆ ಖರ್ಚು ಮಾಡಿದ ಹಣ ಪಾವತಿಸುವಂತೆ ಯುವಕ ಬಿಲ್ ಕಳುಹಿಸಿದ ಘಟನೆ ನಡೆದಿದೆ.
ಯುವತಿಯನ್ನು ಪ್ರೀತಿಸಿದಾಗಿನಿಂದ ಈವರೆಗೆ ತನಗಾದ ಖರ್ಚು-ವೆಚ್ಚಗಳ ವಿವರ ಹಾಗೂ ಜಿಎಸ್ ಟಿ ಸೇರಿಸಿ ಎಲ್ಲಾ ಬಿಲ್ ಸಮೇತ ಕಳುಹಿಸಿದ್ದಾನೆ. ಇದನ್ನು ನೋಡಿದ ಯುವತಿ ಶಾಕ್ ಆಗಿದ್ದಾಳೆ.
ಎಕ್ಸೆಲ್ ಶೀಟ್ ಸಿದ್ಧಪಡಿಸಿ ಅದರಲ್ಲಿ ಪ್ರತಿ ಸಲದ ಕಾಫಿ, ತಿಂಡಿ, ಲಂಚ್, ಡಿನ್ನರ್ ಡೇಟ್, ನೈಟ್ ಪಾರ್ಟಿ, ವ್ಯಾಲಂಟೈನ್ ಡೇ ಗಿಫ್ಟ್ ಸೇರಿದಂತೆ ಒಟ್ಟು 7 ತಿಂಗಳ ಕಾಲ ಪ್ರಿಯತಮೆಗೆ ತಾನು ಮಾಡಿದ ಖರ್ಚನ್ನು ವಿವರಿಸಿದ್ದು, ಅದನ್ನು ಸಂಪೂರ್ಣವಾಗಿ ಭರಿಸುವಂತೆ ಪ್ರಿಯತಮೆಗೆ ಕೇಳಿದ್ದಾನೆ.
7 ತಿಂಗಳ ಕಾಲ ಯುವತಿ ಆತನೊಂದಿಗೆ ಪ್ರೀತಿಯಲ್ಲಿದ್ದು, ಬಳಿಕ ಬ್ರೇಕಪ್ ಆಗಿದೆ. ಈವರೆಗೆ 1 ಲಕ್ಷದ 2 ಸಾವಿರ ರೂಪಾಯಿಯಷ್ಟು ಯುವತಿಗಾಗಿ ಖರ್ಚು ಮಾಡಿದ್ದು, ಜೊತೆಗೆ ವೆಚ್ಚಕ್ಕೆ ಶೇ. 18ರಷ್ಟು ಜಿಎಸ್ ಟಿ ಕೂಡ ಸೇರಿಸಿ ಬಿಲ್ ಕಳುಹಿಸಿದ್ದಾನೆ. @trolls-official ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ಬಿಲ್ ಹಂಚಿಕೊಳ್ಳಲಾಗಿದ್ದು, ಭಾರಿ ವೈರಲ್ ಆಗಿದೆ.