ತಮ್ಮ ತಂದೆ – ತಾಯಿಗೆ ಹೆಮ್ಮೆ ಎನಿಸುವಂತಹ ಕೆಲಸ ಮಾಡಬೇಕು ಅನ್ನೋ ಅಭಿಲಾಷೆ ಎಲ್ಲಾ ಮಕ್ಕಳಿಗೆ ಇರುತ್ತೆ. ಬಾಲ್ಯದಲ್ಲಿ ಚೆನ್ನಾಗಿ ಸಾಕಿ ನಮ್ಮ ಭವಿಷ್ಯ ರೂಪಿಸುವಲ್ಲಿ ಪೋಷಕರ ಮಾತ್ರ ತುಂಬಾನೇ ಮುಖ್ಯ.
ಇದೇ ರೀತಿ ವ್ಯಕ್ತಿಯೊಬ್ಬ ತನ್ನ ಚೆನ್ನಾಗಿ ನೋಡಿಕೊಂಡ ತಾಯಿಗೆ ಸಪ್ರೈಸ್ ಉಡುಗೊರೆ ರೂಪದಲ್ಲಿ ಕಾರನ್ನ ನೀಡಿದ್ದು ಅದನ್ನ ಕಂಡ ತಾಯಿಯ ಖುಷಿ ಪಾರವೇ ಇಲ್ಲ ಎಂಬಂತಾಗಿದೆ.
ತಾಯಿ ಸಂತೋಷಗೊಂಡ ಪರಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
KhristianLue ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನ ಶೇರ್ ಮಾಡಲಾಗಿದೆ. ಇದೇನು ಬೆಂಜ್ ಕಾರಲ್ಲ. ಆದರೆ ನನ್ನ ತಾಯಿಗಾಗಿ ನಾನು ಕಾರನ್ನ ತಂದಿದ್ದೇನೆ. ನಿನ್ನನ್ನ ತುಂಬಾನೇ ಪ್ರೀತಿಸುತ್ತೇನೆ ಕ್ರೇಜಿ ಲೇಡಿ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಮನೆಯ ಹೊರಗೆ ನಿಲ್ಲಿಸಿದ್ದ ಕಾರನ್ನ ನೋಡಿಯೇ ಖುಷಿಯಾದ ತಾಯಿ ಪುತ್ರನ ಬಳಿ ಇದು ಯಾರ ಕಾರು ಎಂದು ಕೇಳಿದ್ದಾಳೆ. ಇದು ನಿನ್ನದೇ ಕಾರು ಎಂದು ಪುತ್ರ ಹೇಳಿದ್ದಾನೆ. ಇದನ್ನ ಕೇಳಿದ ತಾಯಿ ಆನಂದಭಾಷ್ಪ ಸುರಿಸಿದ್ದಾರೆ.
https://twitter.com/i/status/1397433376206991360