![](https://kannadadunia.com/wp-content/uploads/2023/10/e2cec32b-4dae-4ceb-a371-0dd4a4d48c6c-1024x585.jpg)
ಮಹೇಶ್ ಅಮ್ಮಲಿ ದೊಡ್ಡಿ ನಿರ್ದೇಶನದ ‘ಲವ್’ ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲವ್ ಚಿತ್ರತಂಡ ಇಂದು ವಿಡಿಯೋ ಹಾಡೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಿದೆ. ‘ಅವಳಿಲ್ಲದ ಈ ಗಳಿಗೆಯೂ’ ಎಂಬ ಈ ಹಾಡಿಗೆ ಶಿವಪ್ರಸಾದ್ ಧ್ವನಿಯಾಗುವ ಮೂಲಕ ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯನ್ನು ನೀಡಿದ್ದಾರೆ.
ರೋಮ್ಯಾಂಟಿಕ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಶ್ರೀ ಕಾಲಭೈರವ ಮೂವಿ ಮೇಕರ್ಸ್ ಬ್ಯಾನರ್ ರೆಡಿ ದಿವಾಕರ್ ನಿರ್ಮಾಣ ಮಾಡಿದ್ದು, ಪ್ರಜಯ್ ಜಯರಾಮ್ ಮತ್ತು ವೃಷಾ ಪಾಟೀಲ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಛಾಯಾಗ್ರಹಣವಿದ್ದು, ಲೋಕೇಶ್ ಪುಟ್ಟೇಗೌಡ ಸಂಕಲನವಿದೆ.