ಇಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಹಲವಾರು ಸಿನಿಮಾಗಳ ಪೋಸ್ಟರ್ ಹಾಗೂ ಹಾಡುಗಳು ಬಿಡುಗಡೆಯಾಗುತ್ತಿವೆ. ಇದೀಗ ಮಹೇಶ್ ಸಿ ಅಮ್ಮಲಿ ದೊಡ್ಡಿ ರಚಿಸಿ ನಿರ್ದೇಶಿಸಿರುವ ‘ಲವ್’ ಚಿತ್ರದ ‘ಕಣ್ಮಣಿ’ ಎಂಬ ವಿಡಿಯೋ ಹಾಡೊಂದನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಮಾಡಲಾಗಿದೆ.
ನಿರ್ದೇಶಕ ಮಹೇಶ್ ಅವರೇ ಈ ಹಾಡಿನ ಸಾಹಿತ್ಯ ಬರೆದಿದ್ದು, ರೋಷಿತ್ ವಿಜಯನ್ ಧ್ವನಿಯಾಗುವ ಮೂಲಕ ಸಂಗೀತ ಸಂಯೋಜನೆಯನ್ನು ನೀಡಿದ್ದಾರೆ.
ಶ್ರೀ ಕಾಳ ಭೈರವ ಮೂವಿ ಮೇಕರ್ಸ್ ಬ್ಯಾನರ್ ನಡಿ ದಿವಾಕರ್ ಎಸ್ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಪ್ರಜಯ್ ಜಯರಾಮ್ ಹಾಗೂ ಋಷ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲು ಚಿತ್ರತಂಡ ನಿರ್ಧರಿಸಿದೆ.