ಆನ್ಲೈನ್ನಲ್ಲಿ ವ್ಯವಹಾರ ಮಾಡಲು ಹೋಗಿ ದೋಖಾ ಅನುಭವಿಸಿದ ಸಾಕಷ್ಟು ಪ್ರಕರಣಗಳನ್ನ ನಾವು ದಿನನಿತ್ಯದ ಜೀವನದಲ್ಲಿ ನೋಡ್ತಾನೇ ಇರ್ತೇವೆ. ಈಗಂತೂ ಕೊರೊನಾದಿಂದಾಗಿ ನಗದು ವ್ಯವಹಾರ ಮಾಡುವವರ ಸಂಖ್ಯೆಯೇ ಕಡಿಮೆ ಆಗಿ ಹೋಗಿದೆ. ಎಲ್ಲರೂ ಡೆಬಿಟ್, ಕ್ರೆಡಿಟ್ ಹಾಗೂ ಯುಪಿಐ ಮೂಲಕ ಹಣ ವ್ಯವಹಾರ ಮಾಡುತ್ತಾರೆ.
ಆದರೆ ಈ ರೀತಿ ಆನ್ಲೈನ್ ಪೇಮೆಂಟ್ ಮಾಡುವ ವೇಳೆ ನೀವು ಸೈಬರ್ ಕಳ್ಳರ ದಾಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚೇ ಇರುತ್ತೆ. ಹೀಗಾಗಿ ಇ ಪೇಮೆಂಟ್ಗೂ ಮುನ್ನ ನೀವು ಕೆಲ ಮುಖ್ಯ ವಿಚಾರಗಳನ್ನ ಗಮನದಲ್ಲಿರಿಸೋದು ಒಳ್ಳೆಯದು.
ಆನ್ಲೈನ್ ಪೇಮೆಂಟ್ಗಳನ್ನ ಮಾಡುವ ವೇಳೆ ಪಾಸ್ವರ್ಡ್ ಅಥವಾ 3 ಡಿ ಪಿನ್ಗಳನ್ನ ಅವಲಂಬಿಸುವ ಬದಲು ಒಟಿಪಿಗಳಿಗೆ ಹೆಚ್ಚು ಆದ್ಯತೆ ನೀಡಿ. ಏಕೆಂದರೆ ಓಟಿಪಿಗೆ ಅತೀ ಕಡಿಮೆ ಅವಧಿಯವರೆಗೆ ಮಾತ್ರ ಮಾನ್ಯವಾಗೋದ್ರಿಂದ ನೀವು ಸೇಫ್ ಆಗುತ್ತೀರಾ. ಆದರೆ ಯಾವುದೇ ಕಾರಣಕ್ಕೂ ಯಾರೊಂದಿಗೂ ನಿಮ್ಮ ಒಟಿಪಿಯನ್ನ ಶೇರ್ ಮಾಡಲೇಬೇಡಿ. ಯಾರಾದರೂ ಕರೆ ಮಾಡಿ ಒಟಿಪಿ ನೀಡಿ ಅಂತಾ ಹೇಳಿದ್ರು ಅಂತಾ ಎಂದಿಗೂ ಮೋಸ ಹೋಗದಿರಿ.
ನಿಮ್ಮ ಅದೃಷ್ಟ ಬದಲಿಸಬಲ್ಲದು 2 ರೂಪಾಯಿ ನಾಣ್ಯ..!
ಆನ್ಲೈನ್ನಲ್ಲೇ ಶಾಪಿಂಗ್ ಮಾಡುವವರು ನೀವಾಗಿದ್ದರೆ ಆದಷ್ಟು ವಿಶ್ವಾಸಾರ್ಹ ಇ ಮಾರುಕಟ್ಟೆಗಳಲ್ಲೇ ವ್ಯವಹಾರ ನಡೆಸಿ. ಇನ್ನೂ ಹೆಸರನ್ನೇ ಕೇಳದ ನಂಬಿಕೆಗೆ ಅರ್ಹವಲ್ಲದ ವೆಬ್ಸೈಟ್ ಇಲ್ಲವೇ ಅಪ್ಲಿಕೇಶನ್ಗಳಲ್ಲಿ ವ್ಯವಹಾರ ಮಾಡಲು ಹೋಗದಿರಿ. ಇಂತಹ ವೆಬ್ಸೈಟ್ಗಳಲ್ಲಿ ನಿಮ್ಮ ಎಟಿಎಂ ಕಾರ್ಡ್ಗಳನ್ನ ಲಿಂಕ್ ಮಾಡಲು ಹೋಗಲೇಬೇಡಿ. ಇನ್ನು ಯಾವುದೇ ವೆಬ್ಸೈಟ್ಗಳನ್ನ ನೇರವಾಗಿ ಗೂಗಲ್ನಲ್ಲಿ ಹುಡುಕಬೇಡಿ. ಬದಲಾಗಿ ಎಂದಿಗೂ httpsನಲ್ಲೇ ಹುಡುಕಿ.
ವಿಮಾನ ನಿಲ್ದಾಣ, ಕೆಫೆಗಳು ಅಥವಾ ಯಾರೋ ಅಪರಿಚಿತರಿಂದ ವೈಫೈ ಪಡೆದು ಆನ್ಲೈನ್ ಪೇಮೆಂಟ್ಗಳನ್ನ ಮಾಡದಿರಿ. ಇದರಿಂದ ಒಟಿಪಿಯಂತಹ ಗೌಪ್ಯ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಂಪೂರ್ಣ ವ್ಯವಹಾರವನ್ನ ನಿಮ್ಮ ಮೊಬೈಲ್ ನೆಟ್ವರ್ಕ್ನಿಂದಲೇ ಮಾಡಿ.
ಇಲ್ಲಿ ನಡೆಯುತ್ತೆ ಮಹಿಳೆ ‘ಸ್ತನ’ದ ಪೂಜೆ
ಯಾವುದೇ ಇ ಕಾಮರ್ಸ್ ವೆಬ್ಸೈಟ್ಗಳಿಗೆ ಕಠಿಣವಾದ ಪಾಸ್ವರ್ಡ್ಗಳನ್ನ ಅಳವಡಿಸೋಕೆ ಮರೆಯಬೇಡಿ. ನಿಮ್ಮ ಪಾಸ್ವರ್ಡ್ನಲ್ಲಿ ಅಕ್ಷರಗಳು, ಸಂಖ್ಯೆಗಳು, ಚಿಹ್ನೆಗಳು ಹೀಗೆ ಎಲ್ಲವೂ ಇರಲಿ. ಆದರೆ ನಿಮ್ಮ ಜನ್ಮ ದಿನಾಂಕ. ಮೊಬೈಲ್ ಸಂಖ್ಯೆ, ನಿಮ್ಮ ಹೆಸರು ಇಂತವುಗಳನ್ನ ನಿಮ್ಮ ಪಾಸ್ವರ್ಡ್ ಮಾಡಿಕೊಳ್ಳಬೇಡಿ.
ಆನ್ಲೈನ್ ಶಾಪಿಂಗ್ ಪೂರ್ಣಗೊಂಡ ಬಳಿಕ ಇ ಕಾಮರ್ಸ್ ವೆಬ್ಸೈಟ್ನಿಂದ ಲಾಗೌಟ್ ಆಗಿ. ನಿಮ್ಮದೆ ಮೊಬೈಲ್ನಿಂದ ಲಾಗಿನ್ ಆಗಿದ್ದರೂ ಸಹ ಈ ಅಭ್ಯಾಸವನ್ನ ರೂಢಿ ಮಾಡಿಕೊಳ್ಳಿ.