alex Certify ಸೂಕ್ತ ‘ಸಂಗಾತಿ’ ಆಯ್ಕೆ ಮಾಡುವ ಮುನ್ನ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಕ್ತ ‘ಸಂಗಾತಿ’ ಆಯ್ಕೆ ಮಾಡುವ ಮುನ್ನ ತಿಳಿದಿರಲಿ ಈ ವಿಷಯ

ಪ್ರೇಮಿಗಳ ನಡುವೆ ಜಗಳ, ಕೋಪ, ಸಿಟ್ಟು ಸಹಜವಾಗಿರುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಇವೆಲ್ಲಾ ಸಹಕಾರಿಯಾಗುತ್ತವೆ. ಸಾಮಾನ್ಯವಾಗಿ ಒಮ್ಮೆಲೆ ಪ್ರೀತಿ ಆರಂಭವಾಗುವುದಿಲ್ಲ. ಪರಿಚಯದೊಂದಿಗೆ ಗೆಳೆತನವಾಗುತ್ತದೆ. ಆತ್ಮೀಯತೆ ಹೆಚ್ಚಾಗಿ ಪ್ರೀತಿ ಬೆಳೆಯುತ್ತದೆ.

ನಿಮ್ಮ ಆಯ್ಕೆ ಸೂಕ್ತವಾಗಿರಲಿ. ಪ್ರೀತಿಸಿದ ಬಳಿಕ ಪರಿತಪಿಸುವುದಕ್ಕಿಂತ ನಿಮ್ಮ ಜೀವನದಲ್ಲಿ ಜೊತೆಯಾಗುವ, ಸೂಕ್ತವೆನಿಸುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಿ. ಪ್ರೀತಿಸುವ ಗೆಳತಿ ಅಥವಾ ಗೆಳೆಯ ಕೆಲವೊಮ್ಮೆ ಸುಳ್ಳು ಹೇಳುವ ಸಾಧ್ಯತೆ ಇರುತ್ತದೆ. ಅವರು ಹೇಳಿದ ಸುಳ್ಳು ಸಂದರ್ಭೋಚಿತವೇ, ಸಮಯೋಚಿತವೇ ಎಂಬುದನ್ನು ತಿಳಿಯಿರಿ.

ಸಂಗಾತಿಯೊಂದಿಗೆ ಎಲ್ಲಾ ವಿಷಯಗಳನ್ನು ಹಂಚಿಕೊಳ್ಳಿ. ನೀವು, ನಿಮ್ಮ ಹವ್ಯಾಸ, ಕುಟುಂಬದ ಬಗ್ಗೆ ಮತ್ತು ಅವರ ಕುರಿತಾಗಿ ಮಾಹಿತಿ ತಿಳಿಸುವ ಮತ್ತು ತಿಳಿಯುವ ಪ್ರಯತ್ನದಿಂದ ಆತ್ಮೀಯತೆ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಲವರ್ ಬಗ್ಗೆ ಗೊತ್ತಿಲ್ಲದ ಮಾಹಿತಿಗಳು ಗೊತ್ತಾಗುತ್ತವೆ. ಸುಳ್ಳು ಹೇಳಿಕೊಂಡಲ್ಲಿ ಒಂದಲ್ಲ ಒಂದು ದಿನ ಗೊತ್ತಾಗುತ್ತದೆ. ಆಗ ಪರಿತಪಿಸುವ ಬದಲು ನಿಜ ಸಂಗತಿಯನ್ನೇ ಹಂಚಿಕೊಳ್ಳಿ.

ನಿಮ್ಮ ಜೊತೆಗಾರರಿಗೆ ಸುಳ್ಳು ಹೇಳುವುದು ಮೋಸ ಮಾಡಿದಂತೆಯೇ. ಮುಕ್ತವಾಗಿ ಮಾತನಾಡುವುದರಿಂದ ವಿಷಯಗಳ ವಿನಿಮಯವಾಗುತ್ತದೆ. ಸುಳ್ಳು ಹೇಳುವುದು ಆ ಕ್ಷಣಕ್ಕೆ ಸಮಾಧಾನವೆನಿಸಿದರೂ, ಅದು ಶಾಶ್ವತವಲ್ಲ, ಮಾತನಾಡುವ ಸಂದರ್ಭದಲ್ಲಿ ಹಿಂದೆ ಹೇಳಿದ್ದ ಸುಳ್ಳಿನ ನೆನಪಾಗದೇ ಇರಬಹುದು. ಸಂಗಾತಿಯೊಂದಿಗೆ ಮಾತನಾಡಿದ ಮುಖ್ಯ ವಿಷಯಗಳ ಬಗ್ಗೆ ಗಮನವಿರಲಿ. ಅನುಮಾನದಿಂದ ಪ್ರಶ್ನಿಸುವ ಬದಲು ಆತ್ಮೀಯತೆಯಿಂದ ಮಾತನಾಡಿ.

ಸುಳ್ಳು ಹೇಳುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಲ್ಲಿ ಅದರ ಬಗ್ಗೆ ಪ್ರಶ್ನಿಸಿ ಗೊಂದಲ ಬಗೆಹರಿಸಿಕೊಳ್ಳಿ. ಗೊಂದಲ ಮುಂದುವರೆದರೆ, ಅನುಮಾನಕ್ಕೆ ಕಾರಣವಾಗಬಹುದು. ಅದರಿಂದ ಬಿರುಕು ಮೂಡಬಹುದು. ಅದಕ್ಕೆಲ್ಲಾ ಆಸ್ಪದ ಕೊಡದೇ ಎಲ್ಲ ವಿಷಯಗಳನ್ನು ಹಂಚಿಕೊಳ್ಳಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...