alex Certify ಲವ್, ಸೆಕ್ಸ್, ದೋಖಾ: ಕೈಕೊಟ್ಟ ಪ್ರಿಯಕರ, ಕಂಗಾಲಾದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲವ್, ಸೆಕ್ಸ್, ದೋಖಾ: ಕೈಕೊಟ್ಟ ಪ್ರಿಯಕರ, ಕಂಗಾಲಾದ ಯುವತಿ

ಬೀದರ್: ಪ್ರೀತಿ-ಪ್ರೇಮದ ಹೆಸರಲ್ಲಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಯುವಕ ಕೈಕೊಟ್ಟು ಪರಾರಿಯಾಗಿದ್ದಾನೆ. ಇದರಿಂದ ಕಂಗಾಲಾದ ಯುವತಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾಳೆ.

ಬೀದರ್ ನಾರಗೇರಿ ಬಡಾವಣೆ ನಿವಾಸಿಯಾಗಿರುವ ಯುವತಿ ಸಮೀಪದಲ್ಲೇ ವಾಸವಾಗಿದ್ದ ಸಚಿನ್ ಎಂಬುವನನ್ನು ಪ್ರೀತಿಸಿದ್ದಾಳೆ. ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ ಆರೋಪಿ ದೈಹಿಕ ಸಂಬಂಧ ಬೆಳೆಸಿದ್ದು, ಮದುವೆಗೆ ಮೊದಲೇ ಗರ್ಭಿಣಿಯಾಗಿದ್ದಾಳೆ. ಈ ವಿಚಾರ ತಿಳಿದ ಸಚಿನ್ ಪರಾರಿಯಾಗಿದ್ದು, ಬಳಿಕ ಆತನ ಮನೆಯವರು ರೇಪ್ ಕೇಸ್ ಹಾಕಲಾಗುತ್ತದೆ ಎಂಬ ಭಯದಿಂದ ಸಚಿನ್ ಕರೆಸಿ ವಿವಾಹ ನೋಂದಣಿ ಮಾಡಿಸಿದ್ದಾರೆ.

ನಂತರದಲ್ಲಿ ಜನಿಸಿದ್ದ ಮಗು ಮೃತಪಟ್ಟಿದ್ದು, ಸಚಿನ್ ಮತ್ತೆ ಪರಾರಿಯಾಗಿದ್ದಾನೆ. ಗಂಡನ ಮನೆಯವರು ಯುವತಿಯನ್ನು ಹೊರಹಾಕಿದ್ದು, ತವರುಮನೆಯವರೂ ಕೂಡ ಆಕೆಯನ್ನು ಬಿಟ್ಟುಕೊಳ್ಳುತ್ತಿಲ್ಲ. ಇದರಿಂದ ಕಂಗಾಲಾದ ಯುವತಿ ಬೀದರ್ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ. ಅತ್ತ ಗಂಡನೂ ಇಲ್ಲದೇ ಇದ್ದ ಪೋಷಕರ ಬೆಂಬಲವೂ ಇಲ್ಲದೆ ಅಕ್ಕನ ಮನೆಯಲ್ಲಿ ಯುವತಿ ಆಶ್ರಯ ಪಡೆದುಕೊಂಡಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...