ಮೈಸೂರು: ಬ್ಲೇಡ್ ನಿಂದ ಕತ್ತು ಕೊಯ್ದು ತುಂಬ ಗರ್ಭಿಣಿ ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಚಾಮಲಾಪುರದಲ್ಲಿ ಘಟನೆ ನಡೆದಿದೆ.
ಶೋಭಾ ಕೊಲೆಯಾದ ಗರ್ಭಿಣಿ. 8 ವರ್ಷದ ಹಿಂದೆ ಶೋಭಾ, ಮಂಜುನಾಥ್ ಪ್ರೀತಿಸಿ ಮದುವೆಯಾಗಿದ್ದರು. ಮನೆಯಲ್ಲಿ ಕುಳಿತು ಮಾತನಾಡುವಾಗ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತುಂಬ ಗರ್ಭಿಣಿ ಶೋಭಾ ಅವರನ್ನು ಕೊಲೆ ಮಾಡಿದ್ದ ಪತಿ ಮಂಜುನಾಥನನ್ನು ಬಂಧಿಸಲಾಗಿದೆ. ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.