ಗದಗ: ಪ್ರೀತಿಸಿ ಮದುವೆಯಾಗಿದ್ದ ಪುತ್ರಿಯನ್ನು ಪೋಷಕರು ಅಪಹರಿಸಿದ ಘಟನೆ ಗದಗದಲ್ಲಿ ನಡೆದಿದೆ. ಗದಗ ನಗರದ ಡಿಸಿ ಮಿಲ್ ಪ್ರದೇಶದಿಂದ ಯುವತಿ ಅಪಹರಿಸಲಾಗಿದೆ.
ಹುಬ್ಬಳ್ಳಿ ಮೂಲದ ಐಶ್ವರ್ಯಾ ಅವರನ್ನು ಅಭಿಷೇಕ್ ಪ್ರೀತಿಸಿ ಮದುವೆಯಾಗಿದ್ದರು. ಯುವತಿ ಪೋಷಕರ ವಿರೋಧದ ನಡುವೆಯೂ ಅವರು ತಿಂಗಳ ಹಿಂದೆ ದೇವಾಲಯದಲ್ಲಿ ಮದುವೆಯಾಗಿದ್ದು, ಜೂನ್ 23 ರಂದು ಗದಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಣಿಯಾಗಿತ್ತು.
ಜುಲೈ 14ರಂದು ಯುವಕನ ಮನೆಯವರು ಆರತಕ್ಷತೆಗೆ ಪ್ಲಾನ್ ಮಾಡಿಕೊಂಡಿದ್ದು, ಇಂದು ಏಕಾಏಕಿ ಮನೆಗೆ ನುಗ್ಗಿದ ಕುಟುಂಬಸ್ಥರು ಯುವತಿಯನ್ನು ಅಪಹರಿಸಿದ್ದಾರೆ. ಪತಿ ಅಭಿಷೇಕ್ ಕಣ್ಣಿಗೆ ಖಾರದಪುಡಿ ಎರಚಿ ಐಶ್ವರ್ಯಾ ಮೇಲೆ ಹಲ್ಲೆ ಮಾಡಿ ಪೋಷಕರು ಎಳೆದುಕೊಂಡು ಹೋಗಿದ್ದಾರೆ. ಅಭಿಷೇಕ್ ಮತ್ತು ಕುಟುಂಬಸ್ಥರು ಗದಗ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.