ಶ್ರೀನಗರ: ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ತನಗೆ ನ್ಯಾಯ ದೊರಕಿಸಿಕೊಡುವಂತೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆದಿದ್ದಾಳೆ.
ಜಲಂಧರ್ ಆಸ್ಪತ್ರೆಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಯುವತಿ ಉದ್ಯೋಗಿಯಾಗಿದ್ದ ಸಂದರ್ಭದಲ್ಲಿ, ಯುವಕನನ್ನು ಪ್ರೀತಿಸಿದ್ದಳು. ಆಕೆಯ ಶಾಲಾ ದಿನಗಳಿಂದಲೂ ಸಹಪಾಠಿಯಾಗಿದ್ದ ಯುವಕ ಮದುವೆಯ ಸಂದರ್ಭದಲ್ಲಿ ಮತಾಂತರದ ಷರತ್ತು ಹಾಕಿರಲಿಲ್ಲ. ಆತನ ಕುಟುಂಬದವರು ಕೂಡ ಮತಾಂತರವಾಗಲು ಹೇಳಿರಲಿಲ್ಲ. ಆದರೆ, ಮದುವೆಯಾಗಿ ಮನೆಗೆ ಹೋದ ಯುವತಿಗೆ ಶಾಕ್ ಕಾದಿತ್ತು. ಗಂಡ ಮತ್ತು ಆತನ ಮನೆಯವರ ಬಣ್ಣ ಬಯಲಾಗಿತ್ತು.
ಉತ್ತರಪ್ರದೇಶದ ಮಸೀದಿಯಲ್ಲಿ ಮದುವೆಯಾದ ಸಂದರ್ಭದಲ್ಲಿ ಯುವತಿಯ ಹೆಸರನ್ನು ಬದಲಾಯಿಸಲಾಗಿದೆ. ಮದುವೆಯಾಗಿದ್ದ ಯುವಕನಿಗೆ ಈ ಮೊದಲೇ ಮದುವೆಯಾಗಿರುವುದು ಕೂಡ ಯುವತಿಗೆ ಗೊತ್ತಾಗಿದೆ.
ಇನ್ನು ಕ್ಯಾನ್ಸರ್ ಪೀಡಿತೆಯಾಗಿದ್ದ ಯುವತಿ ಗಂಡನ ತಾಯಿ ತನ್ನ ಪತಿಯೊಂದಿಗೆ ಹಾಸಿಗೆ ಹಂಚಿಕೊಳ್ಳಬೇಕೆಂದು ಯುವತಿಗೆ ಒತ್ತಾಯಿಸಿದ್ದಾಳೆ. ಕ್ಯಾನ್ಸರ್ ರೋಗಿಯಾಗಿರುವ ಕಾರಣ ಗಂಡನಿಗೆ ಲೈಂಗಿಕ ಸುಖ ಸಿಗುತ್ತಿಲ್ಲ. ನೀನೇ ಸಹಕರಿಸು ಎಂದು ಸೊಸೆಗೆ ಹೇಳಿದ್ದಾಳೆ. ಇದಕ್ಕೆ ಆಕೆಯ ಗಂಡನು ಕೂಡ ಸಾಥ್ ನೀಡಿದ್ದಾನೆ.
ಯುವತಿ ಇದಕ್ಕೆಲ್ಲ ಒಪ್ಪದಿದ್ದಾಗ ಆಸ್ತಿ, ಹಣ ಕೊಡುವ ಆಮಿಷವೊಡ್ಡಿದ್ದು, ಯುವತಿ ಗಂಡನ ಮನೆಯವರ ಆಮಿಷಕ್ಕೆ ಬಲಿಯಾಗದೇ ಪ್ರತಿಭಟಿಸಿದಾಗ ವೇಶ್ಯಾವಾಟಿಕೆಗೆ ತಳ್ಳಲು ಮುಂದಾಗಿದ್ದರು ಎಂದು ಪತ್ರದಲ್ಲಿ ದೂರಲಾಗಿದೆ.