ರಾಯಚೂರಿನಲ್ಲಿ ಲವ್ ಜಿಹಾದ್, ಮತಾಂತರ ಮಾಡಿದ ಆರೋಪ ಕೇಳಿ ಬಂದಿದೆ. ಶಿಕ್ಷಕಿಯನ್ನು ಮತಾಂತರ ಮಾಡಿ ಮದುವೆಯಾಗಿರುವ ಆರೋಪ ಕೇಳಿ ಬಂದಿದ್ದು, 29 ವರ್ಷದ ಶಿಕ್ಷಕಿ ಪೋಷಕರು ದೂರು ನೀಡಿದ್ದಾರೆ.
ರಾಯಚೂರಿನ ಯರಮರಸ್ ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ಅ. 20 ರಂದು ಶಿಕ್ಷಕಿ ನಾಪತ್ತೆಯಾಗಿದ್ದಾರೆ. ಪತಿ ಮತ್ತು 7 ವರ್ಷದ ಮಗುವನ್ನು ಬಿಟ್ಟು ಶಿಕ್ಷಕಿ ಹೋಗಿದ್ದಾರೆ. ಸಲೀಂ ಎಂಬುವನು ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಶಿಕ್ಷಕಿ ಮೈಂಡ್ ವಾಶ್ ಮಾಡಿ ಆಕೆಯನ್ನು ಕರೆದುಕೊಂಡು ಹೋಗಲಾಗಿದೆ ಎಂದು ಆಕೆಯ ಪೋಷಕರು ಸಲೀಂ ವಿರುದ್ಧ ಆರೋಪ ಮಾಡಿದ್ದಾರೆ. ಶಿಕ್ಷಕಿಯ ತಂದೆ ಮತ್ತು ತಾಯಿ ದೂರು ನೀಡಿದ್ದು, ರಾಯಚೂರು ಗ್ರಾಮೀಣ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿದೆ.