
ಕಲಘಟಗಿ: ಮದುವೆಯಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸುತ್ತಿದ್ದ ವ್ಯಕ್ತಿಯನ್ನು ಕಲಘಟಗಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಕನಕಗಿರಿಯ ಮುಜಾಹಿದ್ ಖಾನ್ ಬಂಧಿತ ಆರೋಪಿ. 2017ರ ಅಕ್ಟೋಬರ್ ನಲ್ಲಿ ಅಶ್ವಿನಿ ಪದ್ಮರಾಜ್ ಜೈನ್ ಎಂಬುವರನ್ನು ಮದುವೆಯಾಗಿದ್ದ. ಮೋಸ ಮಾಡಿ ಮದುವೆಯಾಗಿ ಕಿರುಕುಳ ನೀಡಿದ್ದಾನೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವಂತೆ ಪೀಡಿಸಿದ್ದಾನೆ. ಇದು ಪ್ರೀತಿಯಲ್ಲ, ಲವ್ ಜಿಹಾದ್ ಉದ್ದೇಶದಿಂದ ಮಾಡಿಕೊಂಡ ಮದುವೆಯಾಗಿದೆ ಎಂದು ಆರೋಪಿಸಿದ್ದಾರೆ.
ತನ್ನ ನಿವಾಸದಲ್ಲಿ ಅವಾಷ್ಯ ಪದಗಳಿಂದ ನಿಂದಿಸಿ, ದೈಹಿಕ ಹಾಗೂ ಮಾನಸಿಕ ತೊಂದರೆ ನೀಡುತ್ತಿರುವುದಾಗಿ ಕಲಘಟಗಿಯ ಅಶ್ವಿನಿ ಪದ್ಮರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಜಾಹಿದ್ ಖಾನ್ ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.