
ಪ್ರಸಿದ್ಧ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಏನ್ ಮಾಡಿದ್ರೂ ಪ್ಲಾನ್ ಪ್ರಕಾರವೇ ಮಾಡ್ತಾರೆ. ಅದಕ್ಕೆ ಇದೊಂದು ಉದಾಹರಣೆ. ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಅವರ ಸಂಗಾತಿ ಜಾರ್ಜಿನಾ ರೊಡ್ರಿಗಸ್ ಭವಿಷ್ಯದಲ್ಲಿ ಬೇರೆಯಾದ್ರೆ ಅದಕ್ಕೆ ಈಗ್ಲೇ ವ್ಯವಸ್ಥೆ ಮಾಡಿದ್ದಾರೆ ಕ್ರಿಸ್ಟಿಯಾನೊ ರೊನಾಲ್ಡೊ.
ಒಂದ್ವೇಳೆ ಇಬ್ಬರು ಬೇರೆ ಆದ್ರೆ ಕ್ರಿಸ್ಟಿಯಾನೊ ದೊಡ್ಡ ಮೊತ್ತದ ಹಣವನ್ನು ಜಾರ್ಜಿನಾರಿಗೆ ಪಾವತಿಸಬೇಕಾಗುತ್ತದೆ. ಅದಕ್ಕೆ ಹಣಕಾಸಿನ ವ್ಯವಸ್ಥೆ ಮಾಡಿದ್ದಾರೆ ಶ್ರೀಮಂತ ಫುಟ್ಬಾಲ್ ಆಟಗಾರ.
ಜಾರ್ಜಿನಾ ಮತ್ತು ಕ್ರಿಸ್ಟಿಯಾನೊ 2016 ರಿಂದ ಒಟ್ಟಿಗಿದ್ದಾರೆ. ವಿಶ್ವದ ಪ್ರಸಿದ್ಧ ಜೋಡಿಗಳಲ್ಲಿ ಒಂದಾಗಿರುವ ಇವರ ಮಧ್ಯೆ ಒಪ್ಪಂದವೊಂದಿದೆ. ಇದ್ರ ಪ್ರಕಾರ, ಕ್ರಿಸ್ಟಿಯಾನೊ ಜಾರ್ಜಿನಾರಿಂದ ಬೇರ್ಪಟ್ಟರೆ ಹಣ ನೀಡಬೇಕು. ತಿಂಗಳಿಗೆ 92 ಲಕ್ಷ ರೂಪಾಯಿ ನೀಡಬೇಕು. ಅದ್ರಲ್ಲಿ ಆಜೀವ ಪಿಂಚಣಿ ಸೇರಿದೆ.
ಕಾನೂನು ಒಪ್ಪಂದವು ಮ್ಯಾಡ್ರಿಡ್‌ನಲ್ಲಿರುವ ರೊನಾಲ್ಡೊ ಅವರ ಐಷಾರಾಮಿ ಮಹಲಿನ ಮಾಲೀಕತ್ವವನ್ನು ಜಾರ್ಜಿನಾಗೆ ವರ್ಗಾಯಿಸುವುದನ್ನು ಒಳಗೊಂಡಿದೆ. ವಿಶೇಷ ಲಾ ಫಿಂಕಾ ಪ್ರದೇಶದಲ್ಲಿ ನೆಲೆಗೊಂಡಿರುವ ಆಸ್ತಿಯನ್ನು 2010 ರಲ್ಲಿ ರೊನಾಲ್ಡೊ ಅವರು 4.2 ಮಿಲಿಯನ್ ಯುರೋಗೆ ಖರೀದಿಸಿದ್ದರು.
ಇದು 4,000 ಚದರ ಮೀಟರ್ ಎಸ್ಟೇಟ್‌ನಲ್ಲಿ 950 ಚದರ ಮೀಟರ್‌ಗಳನ್ನು ವ್ಯಾಪಿಸಿದೆ. ರೊನಾಲ್ಡೊ, ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಜುವೆಂಟಸ್ ಮತ್ತು ಈಗ ಸೌದಿ ಅರೇಬಿಯನ್ ಕ್ಲಬ್ ಅಲ್-ನಾಸ್ರ್‌ನಂತಹ ಕ್ಲಬ್‌ಗಳಿಗಾಗಿ ಆಡುವ ಮೂಲಕ 500 ಮಿಲಿಯನ್ ಯುರೋ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.