alex Certify ಆಡಿಲೇಡ್ ರಸ್ತೆಯಲ್ಲಿ ಕಣ್ಣಿಗೆ ಬಿದ್ದ ಲವ್ ಬರ್ಡ್ಸ್…! ಇದು ರಾಹುಲ್ ಮತ್ತು ಆಥಿಯಾ ‌ʼಪ್ರೇಮ್ ಕಹಾನಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಡಿಲೇಡ್ ರಸ್ತೆಯಲ್ಲಿ ಕಣ್ಣಿಗೆ ಬಿದ್ದ ಲವ್ ಬರ್ಡ್ಸ್…! ಇದು ರಾಹುಲ್ ಮತ್ತು ಆಥಿಯಾ ‌ʼಪ್ರೇಮ್ ಕಹಾನಿʼ

ಟೀಂ ಇಂಡಿಯಾ ಡ್ಯಾಶಿಂಗ್ ಓಪನರ್ ಕೆ.ಎಲ್. ರಾಹುಲ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಬ್ಯಾಟ್ ಹಿಡ್ಕೊಂಡು ಗೌಂಡ್‌ಗೆ ಎಂಟ್ರಿ ಆದ್ರೆ ಸಾಕು, ಎಷ್ಟೋ ಹುಡುಗಿಯರು ಅಲ್ಲೇ ಫೀದಾ ಆಗೋಗಿರ್ತಾರೆ. ಆದರೆ ಕೆ.ಎಲ್. ರಾಹುಲ್ ಮಾತ್ರ ಕ್ಲಿನ್ ಬೌಲ್ಡ್ ಆಗಿದ್ದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳು ಆಥಿಯಾ ಶೆಟ್ಟಿಗೆ.

ರಾಹುಲ್ ಮತ್ತು ಆಥಿಯಾ ಶೆಟ್ಟಿ ಲವ್‌ಸ್ಟೋರಿ ಗುಸುಗುಸು ಆಗಾಗ ಕೇಳಿ ಬರ್ತಿದ್ದರೂ ರಾಹುಲ್ ಆಗಲಿ ಇಲ್ಲಾ ಆಥಿಯಾ ಆಗಲಿ ಇದರ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಇದೇ ಜೋಡಿ ಇತ್ತೀಚೆಗೆ ಆಸ್ಟ್ರೇಲಿಯಾದ ಆಡಿಲೇಡ್ ರಸ್ತೆಗಳಲ್ಲಿ ಬಿಂದಾಸ್ ಆಗಿ ಓಡಾಡಿಕೊಂಡು, ಶಾಪಿಂಗ್ ಮಾಡ್ತಿರೋ ದೃಶ್ಯ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ.

ಮುಂದಿನ ವರ್ಷ ಜನವರಿಯಲ್ಲಿ ರಾಹುಲ್ ಮತ್ತು ಆಥಿಯಾ ಇವರಿಬ್ಬರ ಮದುವೆ ಬಗ್ಗೆ ಸುದ್ದಿ ಕೇಳಿ ಬರ್ತಾ ಇದೆ. ಎರಡು ತಿಂಗಳ ಹಿಂದೆ ಇದರ ಬಗ್ಗೆ ರಾಹುಲ್ ಪರೋಕ್ಷವಾಗಿ ಹೇಳಿಕೊಂಡಿದ್ದರು ಕೂಡ. ಕೆಲ ಮಾಹಿತಿ ಪ್ರಕಾರ 2022 ಟಿ-20 ವಿಶ್ವಕಪ್ ನಂತರ ಟೀಂ ಇಂಡಿಯಾ ನ್ಯೂಜಿಲೆಂಡ್ ಪ್ರವಾಸಕ್ಕೆ ಹೊರಡಲಿದೆ. ಅದಕ್ಕೂ ಮುಂಚೆ ಮಹಾರಾಷ್ಟ್ರದಲ್ಲಿ ಆಥಿಯಾ ಮತ್ತು ರಾಹುಲ್ ಮದುವೆ ಅಂತ ಹೇಳಲಾಗುತ್ತಿದೆ. ಆದರೆ ರಾಹುಲ್ ಕುಟುಂಬದವರಾಗಲಿ ಇಲ್ಲಾ ಸುನಿಲ್ ಶೆಟ್ಟಿ ಕುಟುಂಬದವರಾಗಲಿ, ಇದಾವುದರ ಮಾಹಿತಿಯನ್ನ ಮಾಧ್ಯಮದ ಮುಂದೆ ಇನ್ನೂ ಹೇಳಿಲ್ಲ.

ಅನೇಕ ವರ್ಷಗಳಿಂದ ರಾಹುಲ್ ಮತ್ತು ಆಥಿಯಾ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರ ಪ್ರೀತಿಗೆ ಎರಡು ಕುಟುಂಬದವರು ಈಗಾಗಲೇ ಹಸಿರು ನಿಶಾನೆ ಕೂಡಾ ತೋರಿಸಿದ್ದಾಗಿದೆ. ಈಗಾಗಲೇ ಕೆ.ಎಲ್. ರಾಹುಲ್ ಫಾರ್ಮ್ ಗೆ ಮರಳಿದ್ದು, ಈಗ ಆಥಿಯಾ ಕೈ ಹಿಡಿದು ವಿವಾಹ ಆಗುವ ಜೋಶ್ ನಲ್ಲಿದ್ದಾರೆ.

— Zee News (@ZeeNews) November 8, 2022

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...