ಹಾವೇರಿ: ಪ್ರೀತಿಗೆ ಭಾಷೆ, ಧರ್ಮ ಮತ್ತು ಪ್ರದೇಶ ಸೇರಿದಂತೆ ಯಾವುದೇ ಗಡಿಗಳಿಲ್ಲ ಎಂಬ ಮಾತು, ಕರ್ನಾಟಕದ ಪ್ರದೀಪ್ ಖಂಡನವರ್ ಮತ್ತು ವಿಯೆಟ್ನಾಂನ ಕ್ವಿನ್ ತ್ಸಾಂಗ್ ಪ್ರಕರಣದಲ್ಲಿ ನಿಜವಾಗಿದೆ.
ಕರ್ನಾಟಕದ ಹಾವೇರಿಯಲ್ಲಿ ದಂಪತಿಗಳು ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರದೀಪ್ ವಿಯೆಟ್ನಾಂನಲ್ಲಿ ಯೋಗ ತರಬೇತುದಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ನಾಲ್ಕು ವರ್ಷಗಳ ಹಿಂದೆ ಕ್ವಿನ್‌ಳನ್ನು ಭೇಟಿಯಾಗಿದ್ದಾರೆ. ನಂತರ ಇದು ಪರಿಚಯವಾಗಿ ಅಲ್ಲಿಂದ ಪ್ರೀತಿಗೆ ತಿರುಗಿದೆ. ಇದೀಗ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕುಟುಂಬ ಸಮೇತ ದುಬೈಗೆ ಯಡಿಯೂರಪ್ಪ
ಪ್ರದೀಪ್ ಕಳೆದ ಎಂಟು ವರ್ಷಗಳಿಂದ ವಿಯೆಟ್ನಾಂನಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಮದುವೆಯ ವಿಚಾರವನ್ನು ತಿಳಿಸಿದಾಗ ಇಬ್ಬರ ಪೋಷಕರು ಕೂಡ ಯಾವುದೇ ವಿರೋಧವಿಲ್ಲದೆ ಒಪ್ಪಿಗೆ ಸೂಚಿಸಿದ್ದಾರೆ. ನಂತರ ಮದುವೆಯ ದಿನಾಂಕಗಳನ್ನು ನಿಗದಿಪಡಿಸಲಾಯಿತು.
ಹಾವೇರಿ ಜಿಲ್ಲೆಯ ರಾಮತೀರ್ಥಹೊಸಕೊಪ್ಪ ಗ್ರಾಮದಲ್ಲಿ ಇಬ್ಬರೂ ಸತಿ-ಪತಿಗಳಾಗಿ ಹೊಸ ಜೀವನವನ್ನು ಆರಂಭಿಸಿದ್ದಾರೆ. ಮದುವೆಯಲ್ಲಿ ಭಾರತೀಯ ಸಂಪ್ರದಾಯದಂತೆ ಸೀರೆಯನ್ನು ಧರಿಸಿದ್ದು ವಿಶೇಷವಾಗಿತ್ತು. ಜೊತೆಗೆ ಕ್ವಿನ್ ಕನ್ನಡ ಭಾಷೆ ಕಲಿಯಲು ಕೂಡ ಬಹಳ ಉತ್ಸುಕಳಾಗಿದ್ದಾಳಂತೆ.
ಇನ್ನು, ಪ್ರಯಾಣದ ನಿರ್ಬಂಧಗಳಿಂದಾಗಿ, ಆಕೆಯ ಕುಟುಂಬವು ಮದುವೆಗೆ ಬರಲು ಸಾಧ್ಯವಾಗಲಿಲ್ಲ. ಹೀಗಾಗಿ ವಧುವಿನ ಪೋಷಕರು ನವವಿವಾಹಿತರನ್ನು ವಿಡಿಯೋ ಕರೆ ಮೂಲಕ ಆಶೀರ್ವದಿಸಿದ್ದಾರೆ. ದಂಪತಿಗಳು ಶೀಘ್ರದಲ್ಲೇ ವಿಯೆಟ್ನಾಂಗೆ ಮರಳಲಿದ್ದಾರೆ.
