ನೀವೇನಾದರೂ ನಿಮ್ಮ ಎಸ್‌ಬಿಐ ಎಟಿಎಂ ಕಾರ್ಡ್ ಕಳೆದುಕೊಂಡಿದ್ದೀರಾ? ಗಾಬರಿಯಾಗಬೇಡಿ! ಎಸ್‌ಬಿಐ ಆನ್ಲೈನ್ ಮೂಲಕ ನಿಮ್ಮ ಎಟಿಎಂ ಕಾರ್ಡ್ ಅನ್ನು ನೀವೀಗ ಸುಲಭವಾಗಿ ಬ್ಲಾಕ್ ಮಾಡಬಹುದಾಗಿದೆ.
ಚಿನ್ನದ ಸರ ನುಂಗಿದ ನಾಯಿ, ಕುಟುಂಬದವರು ಕಂಗಾಲು
ಈ ಸುಲಭ ಪ್ರಕ್ರಿಯೆಯೆ ಹಂತಗಳು ಹೀಗಿವೆ:
1. www.onlinesbi.com ಗೆ ಲಾಗಿನ್ ಆಗಿ.
2. ಬಳಿಕ “e-Services” ಟ್ಯಾಬ್‌ನಲ್ಲಿ “ATM Card Services>Block ATM Card” ಆಯ್ಕೆ ಮಾಡಿಕೊಳ್ಳಿ.
3. ಯಾವ ಖಾತೆಯಡಿ ನಿಮ್ಮ ಎಟಿಎಂ ಕಮ್ ಡೆಬಿಟ್ ಕಾರ್ಡ್ ಬ್ಲಾಕ್ ಮಾಡಬೇಕೋ ಆ ಖಾತೆ ಆಯ್ಕೆ ಮಾಡಿಕೊಳ್ಳಿ.
4. ಎಲ್ಲಾ ಸಕ್ರಿಯ ಹಾಗೂ ಬ್ಲಾಕ್ ಆಗಿರುವ ಕಾರ್ಡ್‌ಗಳು ಈ ಕಾಣುತ್ತವೆ. ಕಾರ್ಡ್‌ಗಳ ಮೊದಲ 4 ಹಾಗೂ ಕೊನೆಯ 4 ಅಂಕಿಗಳನ್ನು ನೀವು ನೋಡಬಹುದು.
5. ಕಾರ್ಡ್ ಅನ್ನು ಆಯ್ಕೆ ಮಾಡಿಕೊಂಡು “Submit” ಕ್ಲಿಕ್ ಮಾಡಿ. ಬಳಿಕ, ವಿವರಗಳನ್ನು ಪರಿಶೀಲಿಸಿ ಖಾತ್ರಿ ಪಡಿಸಿ.
6. ಎಸ್‌ಎಂಎಸ್ ಓಟಿಪಿ ಅಥವಾ ಪ್ರೊಫೈಲ್ ಪಾಸವರ್ಡ್ ಮೋಡ್ ಅನ್ನು ಆಯ್ಕೆ ಮಾಡಿಕೊಂಡು “Confirm” ಕ್ಲಿಕ್ ಮಾಡಿ ಮುಂದಿನ ಸ್ಕ್ರೀನ್‌ಗೆ ಬನ್ನಿ.
7. ಟಿಕೆಟ್ ಸಂಖ್ಯೆಯೊಂದಿಗೆ ಯಶಸ್ವಿಯಾಗಿರುವ ಸಂದೇಶವೊಂದು ಬಂದಾಗ ನಿಮ್ಮ ಎಟಿಎಂ ಕಮ್ ಡೆಬಿಟ್ ಕಾರ್ಡ್ ಬ್ಲಾಕ್ ಆಗಿದೆ ಎಂದರ್ಥ. ಭವಿಷ್ಯದ ಬಳಕೆಗಾಗಿ ಈ ಉಲ್ಲೇಖದ ಸಂಖ್ಯೆಯನ್ನು ನೋಟ್ ಮಾಡಿಕೊಳ್ಳಿ.