ಶಾಶ್ವತ ಖಾತೆ ಸಂಖ್ಯೆ (PAN) ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಹತ್ತು-ಅಂಕಿಯ ವಿಶಿಷ್ಟ ಆಲ್ಫಾನ್ಯೂಮರಿಕ್ ಸಂಖ್ಯೆ. ಇದು ಹಣಕಾಸು ವ್ಯವಹಾರ ಅಥವಾ ಬ್ಯಾಂಕಿಂಗ್ ಗೆ ಬಹಳ ಮುಖ್ಯವಾದ ದಾಖಲೆ ಎಂಬುದು ನಿಮಗೆ ತಿಳಿದಿರಲೆಬೇಕು. IT ಇಲಾಖೆಯು ನೀಡುವ ಲ್ಯಾಮಿನೇಟೆಡ್ ಪ್ಲಾಸ್ಟಿಕ್ ಕಾರ್ಡ್, PAN ಕಾರ್ಡ್ ಎಂದೇ ಜನಪ್ರಿಯವಾಗಿದೆ.
ಸರ್ಕಾರಿ, ಖಾಸಗಿ ಸೇರಿದಂತೆ ಹಲವಾರು ಕೆಲಸಗಳಿಗೆ ಅತ್ಯಗತ್ಯವಾಗಿರುವ ಪ್ಯಾನ್ ಕಾರ್ಡ್ ಕಳೆದು ಹೋದರೆ, ಆತಂಕ ಬೇಡ. ಆದಾಯ ತೆರಿಗೆ ಇಲಾಖೆ, ಇ-ಪ್ಯಾನ್ ಸೌಲಭ್ಯ ನೀಡುತ್ತಿದ್ದು ಇದಕ್ಕಾಗಿ ಹೊಸ ವೆಬ್‌ಸೈಟ್ ಪ್ರಾರಂಭಿಸಿದೆ. ನೀವು ಸಹ ಈ ವೆಬ್‌ಸೈಟ್ ಮೂಲಕ ಕೆಲವೇ ನಿಮಿಷಗಳಲ್ಲಿ ಇ-ಪ್ಯಾನ್ ಡೌನ್‌ಲೋಡ್ ಮಾಡಬಹುದು.
ಶಾಲೆಗಳಲ್ಲಿ ವಸ್ತ್ರಸಂಹಿತೆ ಪಾಲಿಸಲೇಬೇಕು: ಕಾಂಗ್ರೆಸ್ ಮಿತ್ರ ಪಕ್ಷ ಶಿವಸೇನೆ ನಾಯಕ ಆದಿತ್ಯ ಠಾಕ್ರೆ
ಪ್ಯಾನ್ ಸಂಖ್ಯೆಯೊಂದಿಗೆ ಇ-ಪ್ಯಾನ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ?
1. ಮೊದಲನೆಯದಾಗಿ ಆದಾಯ ತೆರಿಗೆ ವೆಬ್‌ಸೈಟ್ https://www.incometax.gov.in/iec/foportal ಗೆ ಲಾಗಿನ್ ಮಾಡಿ.
2. ಈಗ ‘Instant E PAN’ ಮೇಲೆ ಕ್ಲಿಕ್ ಮಾಡಿ.
3. ಮುಂದೆ, ‘New E PAN’ಮೇಲೆ ಕ್ಲಿಕ್ ಮಾಡಿ.
4. ಈಗ ನೀವು ನಿಮ್ಮ PAN ಸಂಖ್ಯೆಯನ್ನು ನಮೂದಿಸಿ.
5. ನಿಮ್ಮ ಪ್ಯಾನ್ ಸಂಖ್ಯೆ ನಿಮಗೆ ನೆನಪಿಲ್ಲದಿದ್ದರೆ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
6. ಇಲ್ಲಿ ಹಲವು ನಿಯಮಗಳು ಮತ್ತು ಷರತ್ತುಗಳನ್ನು ನೀಡಲಾಗಿದೆ, ಅವುಗಳನ್ನು ಎಚ್ಚರಿಕೆಯಿಂದ ಓದಿ ನಂತರ ”Accept’ ಕ್ಲಿಕ್ ಮಾಡಿ.
7. ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಅದನ್ನು ಹಾಕಿ.
8. ಈಗ ನೀಡಿರುವ ವಿವರಗಳನ್ನು ಓದಿದ ನಂತರ, ‘Confirm’ ಮಾಡಿ.
10. ಈಗ ನಿಮ್ಮ PAN ಅನ್ನು PDF ರೂಪದಲ್ಲಿ ನಿಮ್ಮ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ.
11. ಇಲ್ಲಿಂದ ನಿಮ್ಮ ‘ಇ-ಪ್ಯಾನ್’ ಅನ್ನು ಡೌನ್‌ಲೋಡ್ ಮಾಡಬಹುದು.
ನಿಮ್ಮ ಪ್ಯಾನ್ ಸಂಖ್ಯೆ ನಿಮಗೆ ನೆನಪಿಲ್ಲದಿದ್ದರೆ ಅಥವಾ ನೀವು ಗೊಂದಲಕ್ಕೊಳಗಾಗಿದ್ದರೆ ನಿಮ್ಮ ಆಧಾರ್ ಕಾರ್ಡ್‌ನ ಸಹಾಯದಿಂದ ಇ-ಪ್ಯಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
ಆದರೆ ಇದಕ್ಕಾಗಿ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್‌ನ ಲಿಂಕ್ (PAN Aadhaar link) ಆಗಿರಲೇಬೇಕು. ಪ್ಯಾನ್ ಮತ್ತು ಆಧಾರ್ ಲಿಂಕ್ ಆಗಿರದಿದ್ದರೆ, ಇ-ಪ್ಯಾನ್ ಅನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಆಧಾರ್-ಪ್ಯಾನ್ ಲಿಂಕ್ ಮಾಡಲು 2022ರ, ಮಾರ್ಚ್ 31ನೇ ತಾರೀಖಿನವರೆಗೆ ಗಡುವು ನೀಡಲಾಗಿದೆ ಎಂಬುದು ಗಮನಾರ್ಹ.