ಕೋವಿಡ್ ಸಾಂಕ್ರಾಮಿಕದ ನಡುವೆ ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಕಳೆದ ವರ್ಷವೊಂದರಲ್ಲೇ 2.7 ಕೋಟಿಗೂ ಅಧಿಕ ಮಂದಿ ಗುರುತರ ಕಳ್ಳತನದ ಸಂತ್ರಸ್ತರಾಗಿದ್ದಾರೆ ಎಂದು ಸೈಬರ್ ಸಂಶೋಧನಾ ಸಂಸ್ಥೆ ನಾರ್ಟನ್ ಲೈಫ್‌ಲಾಕ್ ತಿಳಿಸಿದೆ.
ಮುಗ್ಧ ಜನರ ಖಾತೆಗಳಿಂದ ದುಡ್ಡು ಕದಿಯಲು ಹ್ಯಾಕರ್‌ಗಳು ವೈಯಕ್ತಿಕ ಹಾಗೂ ಆರ್ಥಿಕ ಮಾಹಿತಿಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪಾಸ್‌ವರ್ಡ್ ಸೇರಿದಂತೆ ಬಹಳಷ್ಟು ವೈಯಕ್ತಿಕ ಮಾಹಿತಿಗಳನ್ನು ಹ್ಯಾಕರ್‌ಗಳು ಲೂಟಿ ಮಾಡಲು ಪ್ಲಾನ್ ಮಾಡಿದ್ದಾರೆ. ಸಾಮಾನ್ಯವಾಗಿ ಹ್ಯಾಕರ್‌ಗಳು ಬ್ಯಾಂಕ್ ಖಾತೆಗಳಲ್ಲಿ ದುಡ್ಡು ಕದಿಯಲು ಓಟಿಪಿ ದಂಧೆ ಮತ್ತು ಯುಪಿಐಗಳನ್ನು ದುರ್ಬಳಕೆ ಮೇಲೆ ಅವಲಂಬಿತರಾಗಿದ್ದಾರೆ.
ಮುಂದಿನ 5 ವರ್ಷಗಳಲ್ಲಿ 10 ಇವಿ ಕಾರು ಬಿಡುಗಡೆ ಮಾಡಲಿರುವ ಹೋಂಡಾ
ಆನ್ಲೈನ್ ಮೂಲಕ ದುಡ್ಡು ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಸಾಧ್ಯವೇ ಇಲ್ಲವೆಂಬ ಕಾರಣದಿಂದಾಗಿ ಇದು ಭಾರೀ ಬೇಸರ ಮೂಡಿಸುತ್ತದೆ. ಆದರೆ ನೀವು ಕೆಲವೊಂದು ಸರಳ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕಳೆದುಕೊಂಡ ದುಡ್ಡನ್ನು ಮರಳಿ ಪಡೆಯಬಹುದಾಗಿದೆ.
ಅಸಲಿ ತಾಣಗಳ ತದ್ರೂಪಿನಂತೆ ಕಾಣುವ ನಕಲಿ ಪೋರ್ಟಲ್‌ಗಳನ್ನು ಬಳಸುವ ಹ್ಯಾಕರ್‌ಗಳು ಆನ್ಲೈನ್ ಮೂಲಕ ವಂಚನೆ ಎಸಗುತ್ತಾರೆ. ಇಂಥ ಕರ್ಮಕಾಂಡಗಳ ಸಂತ್ರಸ್ತರು ಸಂಪೂರ್ಣ ರೀಫಂಡ್ ಪಡೆಯಬಹುದಾಗಿದೆ ಎಂಬುದು ಬ್ಯಾಂಕಿಂಗ್ ನಿಯಮ.
ಗಗನಕ್ಕೇರಿದ ಟೊಮೆಟೋ, ಈರುಳ್ಳಿ ದರ: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಕೇಂದ್ರದಿಂದ ಗುಡ್ ನ್ಯೂಸ್
ಇದಕ್ಕಾಗಿ ಸಂಬಂಧಪಟ್ಟ ಖಾತೆದಾರರು ಪೇಮೆಂಟ್ ಗೇಟ್‌ವೇ ಸೇರಿದಂತೆ ಭಾಗಿಯಾದ ಪಾರ್ಟಿಗಳು, ಬ್ಯಾಂಕ್ ಹಾಗೂ ಇತರರ ಬಗ್ಗೆ ಮಾಹಿತಿಯನ್ನು ಶೀಘ್ರವೇ ತಮ್ಮ ಬ್ಯಾಂಕುಗಳೊಂದಿಗೆ ಹಂಚಿಕೊಳ್ಳುವ ಮೂಲಕ ಕಳೆದುಕೊಂಡ ದುಡ್ಡನ್ನು ಮರಳಿ ಪಡೆಯಬಹುದಾಗಿದೆ.
ಆರ್‌ಬಿಐ ಪ್ರಕಾರ, ’ಸಿಂಧುವಲ್ಲದ ಎಲೆಕ್ಟ್ರಾನಿಕ್ ವ್ಯವಹಾರಗಳ ಮೂಲಕ ನೀವು ದುಡ್ಡು ಕಳೆದುಕೊಂಡಿದ್ದರೆ, ಕೂಡಲೇ ಬ್ಯಾಂಕಿಗೆ ವಿಷಯ ಮುಟ್ಟಿಸಿದರೆ ನಿಮ್ಮ ಹೊಣೆಗಾರಿಕೆ ಮುಗಿಯುತ್ತದೆ.
ಕಳೆದುಕೊಂಡ ದುಡ್ಡು ಪಡೆಯುವುದು ಹೇಗೆ ?
ಬಹುತೇಕ ಬ್ಯಾಂಕುಗಳು ತಮ್ಮ ಗ್ರಾಹಕರನ್ನು ಆರ್ಥಿಕ ವಂಚನೆಗಳಿಗೆ ವಿಮೆ ಮಾಡಿರುತ್ತವೆ. ಈ ವಿಮೆಯ ಪ್ರಯೋಜನ ಪಡೆಯಲು ಗ್ರಾಹಕರು ಶೀಘ್ರವೇ ತಮ್ಮ ಬ್ಯಾಂಕುಗಳಿಗೆ ವಿಚಾರ ಮುಟ್ಟಿಸಬೇಕು.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್
ಹೀಗೆ ಬ್ಯಾಂಕಿಗೆ ವಿಚಾರ ಮುಟ್ಟಿಸಿದಲ್ಲಿ, ಅಲ್ಲಿಂದ ಶೀಫ್ರವೇ ವಿಮಾ ಸೇವಾದಾರ ಕಂಪನಿಗೆ ವಿಚಾರ ಮುಟ್ಟಿಸಿ, ವಂಚನೆಗೆ ಗ್ರಾಹಕರ ಹೊಣೆಗಾರಿಕೆ ಕಡಿಮೆ ಮಾಡಬಹುದಾಗಿದೆ.
ಸಾಮಾನ್ಯವಾಗಿ 10 ಕೆಲಸದ ದಿನಗಳ ಒಳಗೆ ಈ ನಷ್ಟವನ್ನು ಬ್ಯಾಂಕ್ ತುಂಬಿಕೊಡಲಿದೆ. ಅಸಿಂಧುವಲ್ಲದ ವ್ಯವಹಾರಗಳಿಂದ ಆದ ದುಡ್ಡಿನ ನಷ್ಟವನ್ನು ಬ್ಯಾಂಕುಗಳು ಹಾಗೂ ವಿಮಾ ಸೇವಾದಾರರು ಸಾಮಾನ್ಯವಾಗಿ ಕಟ್ಟಿಕೊಡುತ್ತವೆ.
ಇದಕ್ಕಾಗಿ ಅಸಿಂಧುವಾದ ವ್ಯವಹಾರ ನಡೆದಿದ್ದು ಗೊತ್ತಾದ ಮೂರೇ ದಿನಗಳಲ್ಲಿ ಬ್ಯಾಂಕುಗಳಿಗೆ ಗ್ರಾಹಕರು ವಿಚಾರ ಮುಟ್ಟಿಸಬೇಕು. ಹೀಗೆ ಮಾಡದೇ ಇದ್ದಲ್ಲಿ, ವಂಚನೆಗೆ ಒಳಗಾದ ಗ್ರಾಹಕ 25,000 ರೂ.ಗಳವರೆಗೂ ನಷ್ಟ ಅನುಭವಿಸಬೇಕಾಗುತ್ತದೆ.