ಇತ್ತೀಚೆಗೆ ದಕ್ಷಿಣ ಚೀನಾದಲ್ಲಿ ಧ್ವಂಸಗೊಂಡ ಎರಡು ಬೃಹತ್ ಪ್ರಾಚೀನ ಹಡಗುಗಳು ಪತ್ತೆಯಾಗಿದೆ. ಇದು ಚೀನಾದ ಕಡಲ ಇತಿಹಾಸದ ಪರಿಶೋಧನೆಯಲ್ಲಿ ಪ್ರಮುಖ ಅಂಶವಾಗಿದೆ.
ಚೀನೀ ಪೂರ್ವಜರು ದಕ್ಷಿಣ ಚೀನಾ ಸಮುದ್ರ ಯಾನವನ್ನು ಅಭಿವೃದ್ಧಿಪಡಿಸಿದರು ಮತ್ತು ಪ್ರಯಾಣಿಸಿದರು ಎಂಬ ಐತಿಹಾಸಿಕ ಸತ್ಯವನ್ನು ಇದು ಸಾಬೀತುಪಡಿಸಿದೆ. ಸುಸ್ಥಿತಿಯಲ್ಲಿರುವ ಅವಶೇಷಗಳು ಹೆಚ್ಚಿನ ಐತಿಹಾಸಿಕ, ವೈಜ್ಞಾನಿಕ ಮತ್ತು ಕಲಾತ್ಮಕ ಮೌಲ್ಯವನ್ನು ಹೊಂದಿವೆ. ಇದು ಆಳವಾದ ಸಮುದ್ರದಲ್ಲಿ ವಿಶ್ವ ದರ್ಜೆಯ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರವಾಗಿರಬಹುದು ಎಂದು ಚೀನಾದ ಸಾಂಸ್ಕೃತಿಕ ಪರಂಪರೆಯ ಆಡಳಿತದ ಪುರಾತತ್ವ ಶಾಸ್ತ್ರದ ನಿರ್ದೇಶಕ ಯಾನ್ ಯಾಲಿನ್ ಎಂಬುವವರು ಹೇಳಿದ್ದಾರೆ.
ಮುಳುಗಿದ್ದ ಹಡಗಿನಲ್ಲಿ ಮುಖ್ಯವಾಗಿ ಪಿಂಗಾಣಿ ಮತ್ತು ಇತರ ಮರದ ತುಂಡುಗಳು ಪತ್ತೆಯಾಗಿವೆ. ಸಮುದ್ರದ ವಾಯುವ್ಯ ಇಳಿಜಾರಿನಲ್ಲಿ ಸುಮಾರು 10 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ನೀರಿನಲ್ಲಿ ಸುಮಾರು ಒಂದು ಮೈಲಿ ಆಳದಲ್ಲಿ ಇವು ಕಂಡುಬಂದಿವೆ.
ಈ ಅವಶೇಷಗಳು ಮಿಂಗ್ ರಾಜವಂಶದ ಝೆಂಗ್ಡೆ ಅವಧಿಯಿಂದ 1506 ರಿಂದ 1521 ರವರೆಗೆ ಹಿಂದಿನದು ಎಂದು ನಂಬಲಾಗಿದೆ. ಮುಳುಗಿದ ಹಡಗುಗಳಲ್ಲಿ ಒಂದರಲ್ಲಿ, ಅವಶೇಷಗಳ ಅನೇಕ ರಾಶಿಗಳು ಹಡಗಿನ ಕ್ಯಾಬಿನ್‌ನಿಂದ ಬೇರ್ಪಟ್ಟಿವೆ ಎಂದು ಶಂಕಿಸಲಾಗಿದೆ. ಅಂದಾಜು 100,000 ವಸ್ತುಗಳು ಹೆಚ್ಚಾಗಿ ಪಿಂಗಾಣಿ ಮತ್ತು ಹತ್ತಾರು ಸಾವಿರ ಚದರ ಮೈಲುಗಳಷ್ಟು ಹರಡಿಕೊಂಡಿವೆ. ಅದೇ ಗಾತ್ರದ ಮತ್ತು ಅಂದವಾಗಿ ಜೋಡಿಸಲಾದ ಹಲವಾರು ಮರದ ದಿಮ್ಮಿಗಳು ಇನ್ನೊಂದು ಹಡಗಿನಲ್ಲಿ ಕಂಡುಬಂದಿವೆ. ಈ ಹಡಗಿನ ಕೆಲವು ವಸ್ತುಗಳು ಪ್ರಾಯಶಃ ಚಕ್ರವರ್ತಿ ಹಾಂಗ್ಝಿ (1488-1505) ಆಳ್ವಿಕೆಗೆ ಹಿಂದಿನವುಗಳಾಗಿವೆ ಎನ್ನಲಾಗಿದೆ.