
ಅರ್ಜೆಂಟೈನಾದ ಫುಟ್ಬಾಲ್ ಆಟಗಾರ ಡಿಯಾಗೋ ಮರಡಾನೋಗೆ ಸೇರಿದ ಹೆರಿಟೇಜ್ ಹ್ಯೂಬ್ಲೋಟ್ ವಾಚ್ನ್ನು ಅಸ್ಸಾಂನಲ್ಲಿ ವಶಪಡಿಸಿಕೊಳ್ಳಲಾಗಿದೆ. ಭಾರತೀಯ ಫೆಡರಲ್ ಕಾನೂನು ಜಾರಿ ಏಜೆನ್ಸಿಗಳ ಮೂಲಕ ಅಸ್ಸಾಂ ಪೊಲೀಸರು ಹಾಗೂ ದುಬೈ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು ಎಂದು ಹಿಮಂತ ಬಿಸ್ವ ಶರ್ಮಾ ಮಾಹಿತಿ ನೀಡಿದರು.
ಟ್ವಿಟರ್ನಲ್ಲಿ ಈ ಸಂಬಂಧ ಮಾಹಿತಿ ನೀಡಿರುವ ಸಿಎಂ ಹಿಮಂತ ಬಿಸ್ವ ಶರ್ಮಾ, ಅಂತಾರಾಷ್ಟ್ರೀಯ ಸಹಕಾರ ಕಾರ್ಯಾಚರಣೆಯ ಅಡಿಯಲ್ಲಿ ಅಸ್ಸಾಂ ಪೊಲೀಸರು ಫೆಡರಲ್ ಎಲ್ಇಎ ಮೂಲಕ ದುಬೈ ಪೊಲೀಸರ ಜೊತೆಯಲ್ಲಿ ಸಮನ್ವಯ ಸಾಧಿಸಿದ್ದಾರೆ ಹಾಗೂ ಫುಟ್ಬಾಲ್ ದಂತಕತೆ ದಿವಂಗತ ಡಿಯಾಗೋ ಮರಡೋನಾಗೆ ಸೇರಿದ ಹೆರಿಟೇಜ್ ಹ್ಯೂಬ್ಲೋಟ್ ವಾಚ್ನ್ನು ವಶಕ್ಕೆ ಪಡೆದು ವಾಜಿದ್ ಹುಸೇನ್ ಎಂಬಾತನನ್ನು ಬಂಧಿಸಿದ್ದಾರೆ. ಮುಂದಿನ ಕಾನೂನು ಪ್ರಕ್ರಿಯೆಗಳು ಪ್ರಗತಿಯಲ್ಲಿವೆ ಎಂದು ಟ್ವೀಟಾಯಿಸಿದ್ದಾರೆ.
ದುಬೈನಲ್ಲಿ ದಿವಂಗತ ಡಿಯಾಗೋ ಮರಡೋನಾರಿಗೆ ಸೇರಿದ್ದ ವಸ್ತುಗಳನ್ನು ಸಂಗ್ರಹಿಸುತ್ತಿದ್ದ ಕಂಪನಿಯೊಂದರಲ್ಲಿ ಸೆಕ್ಯೂರಿಡಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ಈ ವಾಚ್ನ್ನು ಕದ್ದಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ದುಬೈನಲ್ಲಿ ವಾಚ್ನ್ನು ಕದ್ದು ಆಗಸ್ಟ್ನಲ್ಲಿ ಅಸ್ಸಾಂಗೆ ಪಲಾಯನ ಮಾಡಿದ್ದಾರೆ ಎನ್ನಲಾಗಿದೆ.