ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಇಲ್ಲಿ ಪತಿಯೊಬ್ಬ ಜೂಜಿನಲ್ಲಿ ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಸೋತ ನಂತರ ಮನೆಗೆ ಬಂದು ತನ್ನ ಹೆಂಡತಿಯನ್ನು ಕುಟುಂಬದೊಂದಿಗೆ ಸೇರಿಕೊಂಡು ಬೆತ್ತಲೆ ಮಾಡಿ ಇಡೀ ರಾತ್ರಿ ಹಲ್ಲೆ ಮಾಡಿದ್ದಾನೆ.
ಈ ಘಟನೆ ಜಿಲ್ಲೆಯ ಗುಲ್ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಗೊಂಡ ಮಹಿಳೆ ಎಸ್ಪಿ ಕಚೇರಿಗೆ ತೆರಳಿ ನ್ಯಾಯಕ್ಕಾಗಿ ಮೊರೆ ಹೋಗಿದ್ದಾಳೆ. ಪೊಲೀಸರಿಗೆ ನೀಡಿದ ದೂರಿನಲ್ಲಿ, ಸಂತ್ರಸ್ತ ಮಹಿಳೆ ತಾನು ಬೌಕನಾ ಗ್ರಾಮದಲ್ಲಿ ವಾಸಿಸುತ್ತಿರುವುದಾಗಿ ಹೇಳಿದ್ದಾಳೆ. ಆಕೆಯ ಪತಿ ಜೂಜಿನ ಚಟಕ್ಕೆ ಬಿದ್ದಿದ್ದು, ಪ್ರತಿದಿನ ಜೂಜಾಡಿ ಮನೆಯ ಯಾವುದಾದರೊಂದು ವಸ್ತುವನ್ನು ಕಳೆದುಕೊಳ್ಳುತ್ತಾನೆ ಎಂದು ತಿಳಿಸಿದ್ದಾಳೆ.
ಈ ಬಾರಿ ಆಕೆಯ ಪತಿ ಜೂಜಾಡಿ ಸೋತಿದ್ದಾನೆ. ಸೋತ ನಂತರ ಮನೆಗೆ ಬಂದು ತನ್ನ ಪತ್ನಿ ರಶ್ಮಿಗೆ ತನ್ನೊಂದಿಗೆ ಇರಬೇಕಾದರೆ ಹಣ ಕೊಡಬೇಕು ಎಂದು ಹೇಳಿದ್ದಾನೆ. ಹೆಂಡತಿ ಹಣ ಕೊಡಲು ನಿರಾಕರಿಸಿದಾಗ, ಆಕೆಯ ಪತಿ, ಮಾವ ಮತ್ತು ಅತ್ತಿಗೆ ಮನೆಯ ಇತರರು ಸೇರಿ ಬೆತ್ತಲೆ ಮಾಡಿ ಇಡೀ ರಾತ್ರಿ ಥಳಿಸಿದ್ದಾರೆ. ಇದರಿಂದ ಆಕೆಯ ಖಾಸಗಿ ಭಾಗಗಳಿಗೆ ಗಂಭೀರವಾಗಿ ಗಾಯಗಳಾಗಿವೆ.
ಸಂತ್ರಸ್ತ ಮಹಿಳೆ ಎಸ್ಪಿ ಕಚೇರಿಗೆ ಬಂದಾಗ ಆಕೆ ಸರಿಯಾಗಿ ನಡೆಯಲು ಸಹ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಮಹಿಳೆಯ ಆರೋಪ ಮತ್ತು ದೂರು ಅರ್ಜಿಯ ಆಧಾರದ ಮೇಲೆ ಪೊಲೀಸರು ಆಕೆಯ ಪತಿ ಸೇರಿದಂತೆ 3 ಜನರ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.