
ಭಾರತದ ಸ್ಟಾರ್ ಆಟಗಾರ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿಫಲತೆ ನಡುವೆಯೂ ತಮ್ಮ ಜಾಹೀರಾತು ಶುಲ್ಕವನ್ನು ಹೆಚ್ಚಿಸಿಕೊಂಡಿದ್ದು, ಕಳೆದ ಒಂದು ವರ್ಷ ಇದರಿಂದಲೇ 240 ಕೋಟಿ ರೂ. ಗಳಿಸಿದ್ದಾರೆ.
ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಅಥ್ಲೀಟ್ ಗಳ 2022 ರ ಸ್ಪೋರ್ಟಿಕೊ ಪರಿಶೀಲನಾಪಟ್ಟಿ ಬಿಡುಗಡೆಗೊಂಡಿದ್ದು, ಅದರಲ್ಲಿ ಕೊಹ್ಲಿ 61 ನೇ ಸ್ಥಾನ ಪಡೆದುಕೊಂಡಿದ್ದಾರೆ.
ಈ ಹಿಂದೆ ಕೊಹ್ಲಿ ಶುಲ್ಕ ದಿನಕ್ಕೆ 2.5 ಕೋಟಿ ರಿಂದ 4 ಕೋಟಿ ರೂ. ಇತ್ತು. ಇದೀಗ ಕೋಲಾ ತಯಾರಕ ಪೆಪ್ಸಿಕೋ ಜೊತೆಗಿನ ಅನುಮೋದನೆ ಒಪ್ಪಂದದ ನವೀಕರಣದ ಮಾತುಕತೆ ನಡೆಯುತ್ತಿರುವುದರಿಂದ 5 ಕೋಟಿಗೆ ಹೆಚ್ಚಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಕೊಹ್ಲಿಯ ಯೋಜನೆಗಳ ಬಗ್ಗೆ ತಿಳಿದ ಇಬ್ಬರು ವ್ಯಕ್ತಿಗಳ ಪ್ರಕಾರ, ಕೊಹ್ಲಿ ಅವರು ಇದುವರೆಗೆ ಕೋಲಾಗಳಿಗೆ ಸಂಬಂಧಿಸಿದ ಆರೋಗ್ಯದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಪೆಪ್ಸಿ ಒಪ್ಪಂದವನ್ನು ನವೀಕರಿಸುವ ಬಗ್ಗೆ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.
BIG NEWS: PSI ಅಕ್ರಮ: ಹೆಸರು ಬಹಿರಂಗ ಪಡಿಸಲು ರೆಡಿ ಎಂದಿರುವ R.D.ಪಾಟೀಲ್; ತನಿಖೆ ಮಾಡುವ ಧೈರ್ಯ ಸರ್ಕಾರಕ್ಕಿದೆಯಾ…..? ಹಿಂದೇಟು ಹಾಕುತ್ತಿರುವುದೇಕೆ…..? ಪ್ರಿಯಾಂಕ್ ಖರ್ಗೆ ಪ್ರಶ್ನೆ
ವಿರಾಟ್ ಕೊಹ್ಲಿ ಪೂಮಾ ಕ್ರೀಡಾ ಉಡುಪುಗಳು, ಹೀರೋ ದ್ವಿಚಕ್ರ ವಾಹನ, ಎಂಆರ್ಎಫ್ ಟೈರ್,ಮಿಂತ್ರಾ, ಅಮೇರಿಕನ್ ಟೂರಿಸ್ಟರ್ ಲಗೇಜ್, ವಿವೊ ಸ್ಮಾರ್ಟ್‌ಫೋನ್ ಮತ್ತು ಹೈಪರಿಸ್ ವೆಲ್‌ನೆಸ್ ಸೇರಿದಂತೆ 30 ಕ್ಕೂ ಹೆಚ್ಚು ಬ್ರಾಂಡ್‌ಗಳನ್ನು ಪ್ರಮೋಟ್ ಮಾಡುತ್ತಿದ್ದಾರೆ.
ಇನ್ನು ಹೆಚ್ಚು ಅನುಮೋದನೆ ಶುಲ್ಕ ಪಡೆಯುತ್ತಿರುವ ಕ್ರೀಡಾಪಟುಗಳಲ್ಲಿ ಲೇ ಬ್ರಾನ್ ಜೇಮ್ಸ್ (693 ಕೋಟಿ ರೂ.) ಮೊದಲ ಸ್ಥಾನದಲ್ಲಿದ್ದರೆ, ರೋಜರ್ ಫೆಡರರ್ (654.5 ಕೋಟಿ ರೂ.) ಎರಡನೇ ಸ್ಥಾನದಲ್ಲಿ, ಕ್ರಿಸ್ಟಿನೋ ರೊನಾಲ್ಡೊ (423 ಕೋಟಿ ರೂ.) ಮೂರನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಮೆಸ್ಸಿ ಇದ್ದಾರೆ.