ಭಾರತೀಯ ಮೂಲದ ಮಸಾಲೆ ಪದಾರ್ಥಗಳು ಅಡುಗೆಯ ರುಚಿಯನ್ನ ಹೆಚ್ಚಿಸೋದ್ರ ಜೊತೆಗೆ ಆರೋಗ್ಯವನ್ನೂ ಕಾಪಾಡುತ್ತವೆ. ಅನೇಕ ಮಸಾಲೆ ಪದಾರ್ಥಗಳಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇದರಲ್ಲಿ ಲವಂಗ ಕೂಡ ಒಂದು. ಲವಂಗ ಸೇವನೆಯಿಂದ ನಿಮ್ಮ ದೇಹದ ಆರೋಗ್ಯ ಚೆನ್ನಾಗಿ ಇರೋದ್ರ ಜೊತೆಗೆ ಇದು ತೂಕವನ್ನೂ ಇಳಿಕೆ ಮಾಡಲಿದೆ.
ಹೌದು..! ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿರುವ ನಿಮ್ಮ ಚಹ ಸೇವನೆ ಸಮಯದಲ್ಲಿ ಈ ಲವಂಗ ಟೀಯನ್ನ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೆಲವೇ ದಿನಗಳಲ್ಲಿ ನಿಮ್ಮ ತೂಕದಲ್ಲಿ ಇಳಿಕೆ ಕಂಡು ಬರಲಿದೆ.
ಬೇಕಾಗುವ ಸಾಮಗ್ರಿ :
ನೀರು – 2ಕಪ್, ಲವಂಗ – 4, ಚಕ್ಕೆ – ಸಣ್ಣ ತುಂಡು, ಶುಂಠಿ – 1/2 ಇಂಚು, ನಿಂಬು ರಸ, ಜೇನುತುಪ್ಪ – 1 ಚಮಚ
ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ನೀರನ್ನ ಕುದಿಯಲು ಇಡಿ . ಇದಕ್ಕೆ ಲವಂಗ, ಚಕ್ಕೆ ಹಾಗೂ ಶುಂಠಿಯನ್ನ ಹಾಕಿ 15 ನಿಮಿಷ ಕಾಯಲು ಬಿಡಿ. ಈ ಮಿಶ್ರಣವನ್ನ ಕಪ್ಗೆ ಹುಟ್ಟಿನ ಸಹಾಯದಿಂದ ಸೋಸಿಕೊಳ್ಳಿ. ಇದಕ್ಕೆ ಒಂದು ಚಮಚ ಜೇನುತುಪ್ಪ ಹಾಗೂ ನಿಂಬು ರಸವನ್ನ ಹಿಂಡಿ.
ಈ ಮಸಾಲಾ ಟೀ ನಿಮ್ಮ ದೇಹದ ಜೀರ್ಣಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯ ಸುಧಾರಣೆಯಾದ್ರೆ ನಿಮ್ಮ ತೂಕ ಇಳಿಕೆಯ ಹಾದಿ ಕೂಡ ಸರಾಗವಾಗುತ್ತೆ.