ಸ್ಥೂಲಕಾಯ ಮತ್ತು ಬೊಜ್ಜಿನ ಸಮಸ್ಯೆ ಹೆಚ್ಚುತ್ತಲೇ ಇದೆ. ತೂಕ ಇಳಿಸಿಕೊಳ್ಳಲು ಯೋಗ, ವ್ಯಾಯಾಮ, ಡಯಟ್ ಇವೆಲ್ಲ ಸಾಮಾನ್ಯ ಪರಿಹಾರಗಳು. ಇದೀಗ ಅಮೆರಿಕನ್ ಡಯಟ್ ಬಹಳ ಜನಪ್ರಿಯವಾಗಿದೆ. ಈ ಡಯಟ್ ಪ್ಲಾನ್‌ನ ವಿಶೇಷತೆಗಳನ್ನು ತಿಳಿಯೋಣ.
ಅಮೆರಿಕದಲ್ಲಿ ಜನರಲ್ ಮೋಟಾರ್ಸ್ ಕಂಪನಿಯೊಂದು ತನ್ನ ಉದ್ಯೋಗಿಗಳ ಫಿಟ್‌ನೆಸ್‌ಗಾಗಿ ವಿಶೇಷ ರೀತಿಯ ಡಯಟ್ ಅನ್ನು ಸಿದ್ಧಪಡಿಸಿದೆ. ಈ ಡಯಟ್ ಪ್ಲಾನ್‌ನ ಪ್ರಮುಖ ಅಂಶವೆಂದರೆ ಇದರಲ್ಲಿ ಹಲವು ಪೋಷಕಾಂಶಗಳು ಸೇರಿಕೊಂಡಿವೆ.
ಈ ಡಯಟ್ ಅನ್ನು ಸರಿಯಾಗಿ ಪಾಲಿಸಿದರೆ ವಾರದಲ್ಲಿ 2-3 ಕೆಜಿ ತೂಕವನ್ನು ಸುಲಭವಾಗಿ ಕಳೆದುಕೊಳ್ಳಬಹುದು. ಅಮೆರಿಕದಲ್ಲಿ ಸಾಕಷ್ಟು ಜನರು ಈ ಡಯಟ್ ಅನ್ನು ಪಾಲಿಸ್ತಿದ್ದಾರೆ.
ಅಮೆರಿಕನ್ ಡಯಟ್‌ನ ಮೊದಲ ದಿನ ಹಣ್ಣುಗಳನ್ನು ತಿನ್ನಬಹುದು, ಆದರೆ ಸಿಹಿ ಹಣ್ಣುಗಳನ್ನು ತಿನ್ನಬೇಡಿ. ಅಲ್ಲದೆ ಸಾಕಷ್ಟು ನೀರು ಕುಡಿಯಬೇಕು. ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯಬೇಕು. ಒಂದು ದಿನದಲ್ಲಿ ಎಷ್ಟು ಹಣ್ಣುಗಳನ್ನು ತಿನ್ನುತ್ತೀರಿ ಎಂಬುದು ಕೂಡ ಮುಖ್ಯ. ವಿಶೇಷವಾಗಿ ಕಲ್ಲಂಗಡಿ ಹಣ್ಣನ್ನು ಸೇವನೆ ಮಾಡಬೇಕು.
ಎರಡನೇ ದಿನ ಬೇಯಿಸಿದ ತರಕಾರಿಗಳನ್ನು ತಿನ್ನಿರಿ. ಬೆಳಗಿನ ಉಪಾಹಾರದಲ್ಲಿ ಮಧ್ಯಮ ಬೇಯಿಸಿದ ತರಕಾರಿಗಳನ್ನು ಸೇವಿಸಬೇಕು. ಮೂರನೇ ದಿನ ಹಣ್ಣು ಮತ್ತು ತರಕಾರಿ ಇವೆರಡನ್ನೂ ಸೇವಿಸಬಹುದು. ಬೆಳಗ್ಗೆ ಹಣ್ಣುಗಳು ಮತ್ತು ಮಧ್ಯಾಹ್ನ ತರಕಾರಿಗಳನ್ನು ತಿನ್ನಬಹುದು. ರಾತ್ರಿ ಸೂಪ್ ಕುಡಿಯಿರಿ ಮತ್ತು ದಿನವಿಡೀ ಸಾಕಷ್ಟು ನೀರು ಕುಡಿಯಬೇಕು.
ಈ ಡಯಟ್‌ನಲ್ಲಿ ಟೊಮ್ಯಾಟೊ ಜೊತೆಗೆ ಮೊಳಕೆ ಕಾಳುಗಳನ್ನು ಸಹ ಸೇವನೆ ಮಾಡಬಹುದು. ಮಧ್ಯಾಹ್ನದ ಊಟಕ್ಕೆ ಬ್ರೌನ್ ರೈಸ್, ಪನೀರ್ ಅಥವಾ ಚಿಕನ್ ತಿನ್ನಬಹುದು. ಏಳನೇ ದಿನ ಸಾಕಷ್ಟು ತರಕಾರಿಗಳನ್ನು ತಿನ್ನಬೇಕು ಜೊತೆಗೆ ಹಣ್ಣಿನ ರಸವನ್ನು ಕುಡಿಯಬಹುದು.