ವಿನಯ್ ರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ‘ಗ್ರಾಮಾಯಣ’ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇಂದು ಈ ಚಿತ್ರಕ್ಕೆ ಲೂಸ್ ಮಾದ ಯೋಗಿಯವರ ಆಗಮನವಾಗಿದೆ. ಲೂಸ್ ಮಾದ ಯೋಗಿ ಅವರ ಖಡಕ್ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಚಿತ್ರತಂಡ ಸ್ವಾಗತ ಕೋರಿದೆ.
ದೇವನೂರು ಚಂದ್ರು ನಿರ್ದೇಶನದ ಈ ಚಿತ್ರವನ್ನು ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್ಟೈನರ್ಸ್ ಬ್ಯಾನರ್ ನಡಿ ಜಿ ಮನೋಹರನ್ ಹಾಗೂ ಶ್ರೀಕಾಂತ್ ಕೆ ಪಿ ನಿರ್ಮಾಣ ಮಾಡಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ನೀಡಿದ್ದಾರೆ.
ವಿನಯ್ ರಾಜಕುಮಾರ್ ಸೇರಿದಂತೆ ಅಮೃತಾ ಅಯ್ಯರ್, ಮೇಘ ಶೆಟ್ಟಿ, ಸಂಪತ್ ಮೈತ್ರೇಯ, ಅಪರ್ಣ, ಧರ್ಮಣ್ಣ, ಶ್ರೀನಿವಾಸ್ ಪ್ರಭು, ಮಂಜುನಾಥ್ ಹೆಗಡೆ ಸೀತಾ ಕೋಟೆ ತೆರೆ ಹಂಚಿಕೊಂಡಿದ್ದಾರೆ.