alex Certify BREAKING NEWS: ಲಾರಿ-ಟೂರಿಸ್ಟ್ ಬಸ್ ಡಿಕ್ಕಿ: 17 ಪ್ರವಾಸಿಗರಿಗೆ ಗಂಭೀರ ಗಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಲಾರಿ-ಟೂರಿಸ್ಟ್ ಬಸ್ ಡಿಕ್ಕಿ: 17 ಪ್ರವಾಸಿಗರಿಗೆ ಗಂಭೀರ ಗಾಯ

ಉಡುಪಿ: ಲಾರಿ ಹಾಗೂ ಟೂರಿಸ್ಟ್ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ 17 ಪ್ರವಾಸಿಗರು ಗಾಯಗೊಂಡಿರುವ ಘಟನೆ ಉಡುಪಿ ತಾಲೂಕಿನ ಉದ್ಯಾವರ ಗ್ರಾಮದಲ್ಲಿ ನಡೆದಿದೆ.

ಉದ್ಯಾವರ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಅಪಘಾತಸಂಭವಿಸಿದೆ. ಕೊಲ್ಲೂರು ದೇವಾಲಯಕ್ಕೆ ತೆರಳುತ್ತಿದ್ದ ಪ್ರವಾಸಿಗರ ಬಸ್, ಮುಂಜಾನೆ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಪ್ರವಾಸಿಗರ ಬಸ್ ನುಜ್ಜುಗುಜ್ಜಾಗಿದೆ.

ಗಾಯಾಳುಗಳನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...