![](https://kannadadunia.com/wp-content/uploads/2023/06/breaking-news-poster-design-template-d020bd02f944a333be71e17e3a38db24_screen-1.jpg)
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಕಾಂಕ್ರಿಟ್ ಮಿಕ್ಸರ್ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ದಂಪತಿ ಸಾವನ್ನಪ್ಪಿರುವ ಘಟನೆ ಉತ್ತರಹಳ್ಳಿಯಲ್ಲಿ ನಡೆದಿದೆ.
ಉತ್ತರಹಳ್ಳಿಯ ಮಧು ಜಂಕ್ಷನ್ ಬಳಿ ಈ ಅಪಘಾತ ನಡೆದಿದೆ. ಕಾಂಕ್ರಿಟ್ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸಿಫ್ ಅಹ್ಮದ್ ಹಾಗೂ ಶಬಾನಾ ಬೇಗಂ ಮೃತ ದುದೈವಿಗಳು.
ಘಟನಾ ಸ್ಥಳಕ್ಕೆ ಕೇಂಗೇರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಂಕ್ರಿಟ್ ಲಾರಿ ಚಾಲಕನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.