ಚಿತ್ರದುರ್ಗ: ಸಾವು ಎನ್ನುವುದು ಯಾವ ರೂಪದಲ್ಲಿ ಯಾವ ಕ್ಷಣ್ದಲ್ಲಾದರೂ ಬರಬಹುದು. ಕಬ್ಬಿನ ಗದ್ದೆಯಲ್ಲಿ ಕುರಿಗಳನ್ನು ಕಟ್ಟಿಹಾಕಿ, ಅಲ್ಲಿಯೇ ಮಲಗಿದ್ದ ಕುರಿಗಾಹಿಗಳ ಮೇಲೆ ಲಾರಿಯೊಂದು ಹರಿದು ಇಬ್ಬರು ಕುರಿಗಾಹಿಗಳು ಮೃತಪಟ್ಟಿರುವ ಘಟನೆ ನಡೆದಿದೆ.
ಸಿದ್ದಪ್ಪ (51) ಯರ್ರಿಸ್ವಾಮಿ (20) ಮೃತರು. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಗ್ರಾಮವೊಂದರ ಕಬ್ಬಿನ ಗದ್ದೆಯಲ್ಲಿ ಕುರಿಗಳನ್ನು ಕಟ್ಟಿಹಾಕಿ, ಕುರಿಗಾಹಿಗಳು ಮಲಗಿದ್ದರು.
ಈ ವೇಳೆ ಕಬ್ಬು ಲೋಡ್ ಮಾಡಲೆಂದು ಬಂದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ, ಕುರಿಗಾಹಿಗಳ ಮೇಲೆ ಹರಿದಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.