
ಹಾವೇರಿ: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೂಲಿಹಳ್ಳಿ ಬಳಿ ಲಾರಿಯೊಂದು ಅಪಘಾತಕ್ಕೀಡಾಗಿದ್ದು, ಅಪಘಾತದ ರಭಸಕ್ಕೆ ಕಬ್ಬಣಿದ ಪೈಪ್ ಚಾಲಕನ ಎದೆಗೆ ಹೊಕ್ಕಿರುವ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ದಾವಣಗೆರೆ ಕಡೆ ತೆರಳುತ್ತಿದ್ದ ಲಾರಿ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿದೆ. ಈ ವೇಳೆ ಸರ್ವಿಸ್ ರಸ್ತೆಯ ಜಾಲರಿಗೆ ಹಾಕಿದ್ದ ಕಬ್ಬಿಣದ ಪೈಪ್ ಚಾಲಕ ಎದೆಗೆ ಹೊಕ್ಕಿದೆ.
ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಚಾಲಕನ ಎದೆಗೆ ಹೊಕ್ಕಿರುವ ಪೈಪ್ ತೀಯಲು ಹರಸಾಹಸಪಟ್ಟಿದ್ದಾರೆ. ಪೈಪ್ ನ್ನು ತುಂಡರಿಸಿ ಬಳಿಕ ಚಾಲಕನನ್ನು ಆಸ್ಪತೆಗೆ ದಾಖಲಿಸಲಾಗಿದೆ. 27 ವರ್ಷದ ಚಾಲಕ ಶಿವಾನಂದ ಬಡಗಿ ಗಾಯಾಳು. ರಾಣೆಬೆನ್ನೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.